ವಿಜಯಪುರ : ಕೊರೊನಾ 4 ಅಲೆ ಹಿನ್ನಲೆ ಜನತೆ ಗಾಭರಿಯಾಗುವ ಅವಶ್ಯಕತೆ ಇಲ್ಲ. ಆಸ್ಪತ್ರೆಗೆ ಸೇರುವವರ ಪ್ರಮಾಣ ಜಾಸ್ತಿ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೊಡಗಾನೂರನಲ್ಲಿ ಮಾತನಾಡಿದ ಅವರು, ಜನತೆ ಜಾಗೃತಿವಹಿಸಬೇಕು.
ಕೊರೊನಾ ನಡಾವಳಿಗಳನ್ನ ಮತ್ತೊಮೆ ಮಾಡಬೇಕಿದೆ. ಮಾಸ್ಕ್, ಸಾಮಾಜಿಕ ಅಂತರವನ್ನು ಎಲ್ಲರು ಪಾಲಿಸಿದರೆ ಒಳ್ಳೆಯದು ಎಂದರು. ಅಲ್ಲದೇ, ನಾಳೆ ಪ್ರಧಾನಿಗಳ ಸಭೆ ಇದೆ. ಸಭೆಯ ಬಳಿಕ ನಿರ್ಣಯ ಮಾಡುತ್ತೇವೆ ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿ ಮುಂಜಾಗೃತೆಗೆ ಸಭೆ ಬಳಿಕ ತೀರ್ಮಾನ ಮಾಡುತ್ತೇವೆ ಎಂದರು.