ಇಂಡಿ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ..!
ಭವಿಷ್ಯದಲ್ಲಿ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ಪಟ್ಟಣದ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ
ಪೋಲೀಸರು ಬಳಸುವ ಏಕವಚನದ ಪದ..!
ಟ್ರಾಫಿಕ್‌ನಿಂದ ರೈತರಿಗೆ, ಗ್ರಾಹಕರಿಗೆ, ಜನ ಸಾಮನ್ಯರ ಸಮಸ್ಯೆಗಳು ನೂರೆಂಟು..?
ಇಂಡಿ : ವಿಜಯಪುರ ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಐದು ತಾಲ್ಲೂಕುಗಳನ್ನು ಹೊಂದಿರುವ ಕಂದಾಯ ಉಪ ವಿಭಾಗ ಕಛೇರಿ,ಪೋಲಿಸ್ ಉಪವಿಭಾಗ ಕಛೇರಿ, ಲಿಂಬೆ ಅಭಿವೃದ್ಧಿ ಮಂಡಳಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಉಪವಿಭಾಗ ಕಚೇರಿ ಹೊಂದಿರುವ ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಭೀಮಾತೀರದ ಖ್ಯಾತಿಯ ಇಂಡಿ ಪಟ್ಟಣಕ್ಕೆ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ..! ಈ ಸಮಸ್ಯೆಗಳಿಗಾಗಿ ಒಂದು ಪರಿಪೂರ್ಣ ಮಾಹಿತಿ ಇಲ್ಲಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣಕ್ಕೆ ನೆರೆಯ ಮಹಾರಾಷ್ಟ್ರ ಮತ್ತು ಇತರೆ ಜಿಲ್ಲೆಗಳ ವಾಹನ ಸಂಚಾರ ಹಾಗೂ ಇಂಡಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹಾಗೂ ಓಡಾಟ ಹೆಚ್ಚಾಗಿದೆ. ಆ ಕಾರಣದಿಂದಾಗಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದ್ದರಿಂದ ವಾಹನ ಸವಾರರು ಎಲ್ಲಿ ಬೇಕೋ ಅಲ್ಲಿ ಮನಬಂದಂತೆ ಗಾಡಿ ನಿಲ್ಲಿಸುವ ಪರಿಪಾಠ ಈಗ ಎದುರಾಗಿದೆ.
👉ಗ್ರಾಹಕರಿಗೆ ಹಾಗೂ ಅಂಗಡಿಕಾರರಿಗೆ ಕಷ್ಟ..!
ಇವೆಲ್ಲ ಕಾರಣಗಳಿಂದ ಮತ್ತು ವ್ಯಾಪಾರ ಮಳಿಗೆಗಳಿಗೆ ಬರುವ ದಿನ ನಿತ್ಯದ ಗ್ರಾಹಕರಿಗೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಸರಿಯಾಗಿ ಸರತಿ ಸಾಲಿನಲ್ಲಿ ವಾಹನಗಳನ್ನು ಸ್ವಲ್ಪ ಅಂತರ ಬಿಟ್ಟು ನಿಲ್ಲಿಸಿದರೆ ಗ್ರಾಹಕರಿಗೂ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ.
👉 ಚಕ್ರವ್ಯೂಹಕ್ಕೆ ಹೊಕ್ಕಂತೆ
ಪಟ್ಟಣದ ಬಸವೇಶ್ವರ ವೃತದ ಪಕ್ಕದಲ್ಲಿ ವಾಹನ ಪಾರ್ಕ್ ಮಾಡುವುದೆಂದರೇ ಚಕ್ರವ್ಯೂಹದ ಒಳಗೆ ಹೊಕ್ಕಂತೆ ಭಾಸವಾಗುತ್ತದೆ.ಎಲ್ಲಿ ನೋಡಿದರೂ ಬಾಡಿಗೆ ವಾಹನಗಳ ಪಾರ್ಕಿಂಗ್ ವಲಯವಿರುವುದರಿಂದ ಜನರು ಸ್ವಂತ ವಾಹನಗಳನ್ನು ಪಾರ್ಕ್ ಮಾಡುವುದೇ ಕಷ್ಟಕರವಾಗಿದೆ. ಕೆಲವು ಕಡೆಗಳಲ್ಲಿ ಫುಟ್ ಪಾತ್ ಗಳಲ್ಲಿಯೇ ಅಂಗಡಿಗಳಿದ್ದು, ಪಾದಚಾರಿಗಳು ನಡೆದಾಡಲು ಕಷ್ಟವಾಗಿದೆ.ಈ ಅತಿಕ್ರಮಣಗಳನ್ನು ಸ್ಥಳೀಯ ಪುರಸಭೆ ತೆರವುಗೊಳಿಸಿದಲ್ಲಿ ಸಮಸ್ಯೆಯನ್ನು ಬಗೆ ಹರಿಸಬಹುದಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಇಂಡಿಯಲ್ಲಿ ಪಾರ್ಕಿಂಗ್ ಹಾಗೂ ಟ್ರಾಫೀಕ್ ಸಮಸ್ಯೆ ಹೇಳತೀರದು. ವಿಚಿತ್ರವೆಂದರೇ ಎಲ್ಲಿಯೂ ಪಾರ್ಕಿಂಗ್, ನೋ ಪಾರ್ಕಿಂಗ್ ಫಲಕಗಳಿಲ್ಲ.ಕಾರು ತಗೊಂಡು ತರಕಾರಿ ತಂದವ ನಿಜವಾದ ಹೀರೋ ಇಲ್ಲಿ. ರಿಕ್ಷಾಗಳು ಮತ್ತು ಜೀಪುಗಳು, ರಸ್ತೆ ಬದಿಯ ವ್ಯಾಪಾರ ಇಡೀ ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಆವರಿಸಿದೆ. ಚತುಸ್ಪದ ರಸ್ತೆ ಹೊಂದಿರುವ ಪ್ರತಿ ರಸ್ತೆಯ 1.5 ಕಿ.ಮೀ. ಉದ್ದದ ಕಡೆಯೂ ಪಾರ್ಕಿಂಗ್ ವ್ಯವಸ್ಥೆ ಕಷ್ಟದಾಯಕವಾಗಿದೆ.ಎಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇಲ್ಲಿರುವ ಟ್ರಾಫಿಕ್ ಪೊಲೀಸ್ ಏನೂ ಫಲಕಾರಿ ಆದಂತೆ ಕಾಣುತ್ತಿಲ್ಲ. ಹೇಗೋ ಜಾಗ ಸಿಕ್ಕಿತಲ್ಲ ಎಂದು ವಾಹನ ನಿಲ್ಲಿಸಿದರೆ ಸೂಚನಾ ಫಲಕ ಇಲ್ಲದಿದ್ದರೂ ದಂಡ ಚೀಟಿ ಬರೆಯುತ್ತಾರೆ.ಸರಿಯಾದ ಪಾರ್ಕಿಂಗ್, ಫುಟ್ ಪಾತ್ ಮತ್ತು ಸೂಚನಾ ಫಲಕಗಳು ಅತಿ ಅಗತ್ಯವಾಗಿ ಬೇಕಾಗಿದೆ.ರಸ್ತೆಯ ಬದಿಯ ಬಾಡಿಗೆ ವಾಹನ ನಿಲುಗಡೆಯ ವ್ಯವಸ್ಥೆ ಕೂಡಾ ಕ್ರಮಬದ್ಧಗೊಳಿಸಬೇಕಾಗಿದೆ.
👉 ಎಲ್ಲಿ-ಎಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ..?
ಮುಖ್ಯವಾಗಿ ಎಸ್ ಬಿ ಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಪಿಎಮ್ಸಿ ಎದುರು, ಟಿಪ್ಪು ಸುಲ್ತಾನ ವೃತ್,
ಬಸವೇಶ್ವರ ವೃತ್, ಸಂಗೋಳ್ಳಿ ರಾಯಣ್ಣ ವೃತ್, ಮಹಾವೀರ ವೃತ್ ಅದಲ್ಲದೇ ಸಿಂದಗಿ ರಸ್ತೆ,ರೈಲ್ವೇ ಸ್ಟೆಷನ್ ರಸ್ತೆ, ಅಗರಖೇಡ ರಸ್ತೆ ಹಾಗೂ ವಿಜಯಪುರ ಈ ರಸ್ತೆಯ ಪಕ್ಕದಲ್ಲಿ ವಾಹನಗಳು ನಿಲ್ಲುವುದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಅದಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸುವ ಮತ್ತು ಅವಶ್ಯಕ ಇರುವ ಬೋರ್ಡ್ಗಳನ್ನು ಹಾಕಿದರೆ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಧ್ಯ.