ಅ- 15 ರಿಂದ ಇಂಡಿಯಲ್ಲಿ ನವರಾತ್ರಿ ಉತ್ಸವ..
ಇಂಡಿ : ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನ ಸೇರಿದಂತೆ ದುರ್ಗಾ ಪರಮೇಶ್ವರಿ ಮಿತ್ರ ಮಂಡಳಿ
ಭೀರಪ್ಪನಗರ, ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣಿ, ಭುವನೇಶ್ವರಿ ಯುವಕ
ಮಂಡಳಿ ಹೂಗಾರ ಓಣಿ, ಶ್ರೀ ಅಂಬಾಭವಾನಿ ನವ
ತರುಣ ಮಂಡಳಿ ಚಾವಡಿ ಓಣಿ ಯಲ್ಲಿ ಅ. 15 ರಿಂದ 23 ರವರೆಗೆ ನವರಾತ್ರಿ ನಿಮಿತ್ಯ ನಾನಾ ಧಾರ್ಮಿಕ
ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 15 ರಂದು ನಗರದ ಪ್ರಮುಖ ಬೀದಿಗಳಲ್ಲಿ
ಬೆಳಗ್ಗೆ 11 ರಿಂದ ದೇವಿಯ ಭಾವಚಿತ್ರ ಮೆರವಣೆಗೆ
ನಡೆಯುವದು. ಅದರಂತೆ ಚವಡಿ ಓಣಿಯ ಶ್ರೀ
ದೇವಿಯ ಮೆರವಣೆಗೆ ಜೊತೆಗೆ ಶ್ರೀ ಅಂಬಾಭವಾನಿ
ದೇವಸ್ಥಾನದ ನೂತನವಾಗಿ ನಿರ್ಮಿಸಿದ ಶಿಖರದ
ಕಳಸದ ಮೆರೆವಣೆಗೆ ನಡೆಯುವದು. ಪ್ರತಿದಿನ ಬೆಳಗ್ಗೆ ಅಂಬಾಭವಾನಿ ದೇವಸ್ಥಾನದಲ್ಲಿ ಆರತಿ, ಅಭಿಷೇಕ, ಪೂಜೆ, ಪಾಲಕಿ ಉತ್ಸವ ನಡೆಯಲಿದೆ. ಅದಲ್ಲದೆ ಅಂಬಾಭವಾನಿ ದೇವಸ್ಥಾನ ಸಮಿತಿ ಮತ್ತು
ಭಕ್ತರಿಂದ ಆರತಿ ನಂತರ 15 ನಿಮಿಷ ಮಳೆಗಾಗಿ
ದೇವಿಯ ಪ್ರಾರ್ಥನೆ ನಡೆಯುವದು. 22 ರಂದು ಅಷ್ಟಮಿಯ ದಿವಸ ಗಾಣಗಾಪುರ ಅರ್ಚಕರಿಂದ ಚಂಡಿಹೋಮ, ಪೂಜೆ,ಛಬೀನಾ, ಮಂಗಳಾರತಿ
ಕಾರ್ಯಕ್ರಮಗಳು ಜರುಗುವವು , 23 ರಂದು
ಖಂಡೆ ಪೂಜಾ ದಿನ ಗೊಂದಲ ಕಾರ್ಯಕ್ರಮ
ಜರಗುವವು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ
ಅರುಣ ಕೋಳೆಕರ, ಗಣೇಶ ಮಹೀಂದ್ರಕರ,
ಬಾಪು ಮಹೀಂದ್ರಕರ, ಮನೋಜ ಕೋಳೆಕರ,
ವಿಜಯ ಪತಂಗೆ, ರಮೇಶ ಸುಲಾಖೆ, ಸುಭಾಸ ಬಳಮಕರ, ನಾಗನಾಥ ಹಂಚಾಟೆ, ಬಾಬುರಾವ ಸುಲಾಖೆ, ರಮಾಕಾಂತ ಕೋಳೆಕರ ತಿಳಿಸಿದ್ದಾರೆ.
ಎಲ್ಲ ಕಡೆ ಸಾಂಸ್ಕøತಿಕ ಕಾರ್ಯಕ್ರಮ, ಡೊಳ್ಳಿನ
ಪದಗಳು , ರಸಮಂಜರಿ ಕಾರ್ಯಕ್ರಮ ನಡೆಯುವವು ಎಂದು ನವರಾತ್ರಿ ಉತ್ಸವ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.