ಇಂಡಿ : ತಾಂಬಾ ಗ್ರಾಮದಲ್ಲಿ ನಡೆಯುತ್ತಿರುವ ಗುತ್ತಿ ಬಸವಣ್ಣ ಧರಣಿ ಸತ್ಯಾಗ್ರಹ 125ನೇ ದಿನಕ್ಕೆ ಪಾದರ್ಪಣೆ ಮಾಡಿದ ಕಾರಣ, ಕರವೇ ಅಧ್ಯಕ್ಷ ಶಿವರಾಜ ಕೆಂಗನಾಳ ಮಾತನಾಡಿ ನಮ್ಮ ಭಾಗದಲ್ಲಿ ವಾಡಿಕೆ ಬರುವಂತಹ ಮಳೆನು ಇಲ್ಲ, ಇತ್ತ ಕಡೆ ಕಾಲುವೆಗೆ ನೀರು ಇಲ್ಲ . ಇಂತಹ ಕೆಟ್ಟ ಬರಗಾಲ ಸ್ಥಿತಿ ಬಂದೋದಗಿದೆ. ಈ ಸಮಯದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೋಡಗಬೇಕಿತ್ತು, ಆದರೆ ಈ ಸಮಯದಲ್ಲಿ ಕಾಲುವೆಗೆ ನೀರು ಹರಿಸಿದರೆ ಮಾತ್ರ ಅವರಿಗೆ ಅಮೃತ ಸಿಕ್ಕಾಗೆ ಆಗುತ್ತೆದೆ. ಇಂತಹ ಕೆಟ್ಟ ಸಮಯದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಚಿರನಿದ್ರೆಗೆ ಜಾರಿರಿರುವ ಹಾಗೆ ಕಾಣುತ್ತಿದೆ. ಇನ್ನೂ ನಮ್ಮ ರೈತರು ಹಗಲು ರಾತ್ರಿ ಎನ್ನದೆ ಮೂರು ತಿಂಗಳ ನಿರಂತರವಾಗಿ ಧರಣಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಯೋದ್ದೋಪಾಹಾದಿಯಲ್ಲಿ ಕೆಲಸ ಮಾಡದೆ ಆಮೆಗತಿಯಲ್ಲಿ ಕಾಮಗಾರಿಗಳು ಮಾಡುತ್ತಿರುವುದು ಕಂಡುಬಂದಿದ್ದು, ಕೂಡಲೇ ಜರೂರು ಈ ಕೆಲಸ ಮಾಡಿ ಮುಗಿಸಿ ನೀರು ಹರಿಸದಿದ್ದರೆ ಕರವೇ ವತಿಯಿಂದ ತಾಂಬಾ ಹಾಗೂ ತಾಲೂಕು ಮತ್ತು ಜಿಲ್ಲಾ ಘಟಕದವರು ಕೂಡಿ ಹೆದ್ದಾರಿ ರಸ್ತೆ ತಡೆದು ಪಾದಯಾತ್ರೆ ಮುಖಾಂತರ ಪ್ರತಿಭಟನೆ ಮೆರವಣಿಗೆ ನಿಮ್ಮ ಕಚೇರಿವರೆಗೂ ಬರುವುದು ಎಚ್ಚರಿಕೆ! ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಕರವೇ ಉಪಾಧ್ಯಕ್ಷ ಶಿವಯೋಗಿ ಸರಸಂಬಿ, ಸಂಜು ಜೇವೂರ್, ಗಂಗಾಧರ್ ಕಾಂಬಳೆ, ಸುರೇಶ್ ವಾಗ್ಮೋರೆ, ಗೋಪಾಲ್ ಅವರಾದಿ, ಸಿದ್ದು ದಿವಟಗಿ, ಚಿದು ಕೆಂಗನಾಳ ಇನ್ನೂ ಅನೇಕರು ಉಪಸ್ಥಿತರಿದ್ದರು.