ಜಿಲ್ಲೆಯಲ್ಲಿ ಡೇ-ನಲ್ಮ್ ಯೋಜನೆಯ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ 12 ದಿನಗಳ ತರಬೇತಿ
ವಿಜಯಪುರ ಆಗಸ್ಟ್ ೪ : ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ನಿಪ್ಪಾನ ಪೇಂಟ್ ಮತ್ತು ಶ್ರೀ ಬಸವೇಶ್ವರ ಎಂಟರ್ ಪ್ರೈಸಸ್ ಇವರ ಸಹಯೋಗದಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮವಾಗಿ ವಿಜಯಪುರ ಜಿಲ್ಲೆಯಲ್ಲಿ ಡೇ-ನಲ್ಮ್ ಯೋಜನೆಯ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ೧೨ ದಿನಗಳ ತರಬೇತಿ ಮತ್ತು ೦೬ ದಿನಗಳ ಪ್ರಾತ್ಯಕ್ಷಿಕೆ ಸೇರಿದಂತೆ ಒಟ್ಟು ೧೮ ದಿನಗಳ ಪೇಂಟಿAಗ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದಿನಾಂಕ:೨೮-೦೭-೨೦೨೫ ರಂದು ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ ಉದ್ಘಾಟಿಸಿ ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿ ನಿಪ್ಪಾನ್ ಪೇಂಟ ಕಂಪನಿಯ ವತಿಯಿಂದ ತರಬೇತಿ ನೀಡಿದ ಟ್ರೇನರ್ ಗಣೇಶ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ಉಮಾಶ್ರೀ ಕೋಳಿ ಇವರು ಶಿಭಿರಾರ್ಥಿಗಳಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು.
ಕಾರ್ಯಾಕ್ರಮದಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಅಭಿಯಾನ ವ್ಯವಸ್ಥಾಪಕರಾದ ಶ್ರೀಮತಿ ಸುನಂದಾ ಬಾಲಪ್ಪನವರ, ಜಿಲ್ಲೆಯ ಅರ್ಕಿಟೆಕ್ಟ್ ಸಂಘದ ಶ್ರೀಮತಿ ಗಂಗಾ ರೆಡ್ಡಿ, ವಿಜಯಪುರ ಸಿವಿಲ್ ಇಂಜನಿಯರ್ ಸಂಘದ ಅಧ್ಯಕ್ಷ ಅರುಣ ಮಠ, ಜಗದೀಶ ಅಬ್ದುಲ್ಪುರ, ಕಿರಣ ಶೇಖದಾರ, ನಿಪ್ಪಾನ ಪೇಂಟಿನ್ ತಮಿಳುನಾಡು ವಿಭಾಗದ ಪ್ರಮುಖರಾದ ಶ್ರೀಮತಿ ನೀಲಮ್ ಕುಮಾರಿ ಇತರರು ಉಪಸ್ಥಿತರಿದ್ದರು. ಸ್ನೇಹಾ ಅವಜಿ ಕಾರ್ಯಕ್ರಮ ನಿರೂಪಿಸಿದರು.