ಶ್ರೀ ಶಾಂತೇಶ್ವರ ಟ್ರಸ್ಟ ಕಮೀಟಿ ವಿಸರ್ಜಿಸಿ, ನೂತನ ಕಮೀಟಿ ರಚನೆಗೆ ಆಗ್ರಹಿಸಿ 12 ದಿನಕ್ಕೆ ಕಾಲಟ್ಟ ಧರಣಿ
ಇಂಡಿ: ಶ್ರೀ ಶಾಂತೇಶ್ವರ ಟ್ರಸ್ಟ ಕಮೀಟಿ ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಲೆಕ್ಕ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ ೧೨ ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರವಿಗೌಡ ಪಾಟೀಲ, ಸಾತಪ್ಪ ತೆನ್ನೆಳ್ಳಿ ಮಾತನಾಡಿ, ಕಮೀಟಿಯವರಿಗೆ ಲಿಖಿತವಾಗಿ ಲೆಕ್ಕಪತ್ರ ನೀಡಲು ಮನವಿ ಮಾಡಿದ್ದೇವೆ. ಆದರೆ ಅವರು ಧರಣ ನಡೆಸುತ್ತಿರುವ ಸ್ಥಳಕ್ಕೆ ಬಂದು ಲೆಕ್ಕಪತ್ರ ನೀಡಿಲ್ಲ, ಅಲ್ಲದೆ ದೇವಸ್ಥಾನದ ನೋಟಿಸ್ ಬೋರ್ಡಿಗೆ ಲೆಕ್ಕಪತ್ರ ಅಂಟಿಸಲಾಗಿದೆ ಎಂದು ಹೇಳಿದ್ದಾರೆ ಆದರೆ ಅಲ್ಲಿ ಅಂಟಿಸಿಲ್ಲ. ಪಾಂಪ್ಲೇಟ್‌ಗಳಲ್ಲಿ ಲೆಕ್ಕಪತ್ರ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದ್ದು, ಅದಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಸಹಿ ಇಲ್ಲ, ಅಲ್ಲದೆ ಸರಿಯಾದ ಲೆಕ್ಕಪತ್ರ ನೀಡಿಲ್ಲ, ಹುಂಡಿಯಿಂದ ಪ್ರತೀವರ್ಷ ತೆಗೆಯುವ ಹಣದ ಬಗ್ಗೆ ಮಾಹಿತಿ ನೀಡಿಲ್ಲ. ದೇವಸ್ಥಾನದ ಕಮೀಟಿಯಲ್ಲಿ ಬೇರೆ ಊರಿನಿಂದ ವಲಸೆ ಬಂದವರನ್ನು ಹಾಕಿಕೊಂಡು ಕಮೀಟಿ ರಚಿಸಿದ್ದಾರೆ. ಮೂಲ ಸ್ಥಳೀಯರಿಗೆ ಆಧ್ಯತೆ ನೀಡಿಲ್ಲ ಎಂದು ಆರೋಪಿಸಿದರು.
ಟ್ರಸ್ಟ ಕಮೀಟಿ ವಿಸರ್ಜಿಸಿ ನೂತನ ಕಮೀಟಿ ರಚನೆಯಾಗಬೇಕು. ಧರಣ ನಡೆಸುತ್ತಿದ್ದರೂ ಧರಣ ಸ್ಥಳಕ್ಕೆ ಬಾರದೆ ಸಾರ್ವಜನಿಕರಿಗೆ ಅಗೌರವ ತೋರಿದ್ದಾರೆ. ಅವರ ವಿರುಧ್ಧ ಸೂಕ್ತ ಕ್ರಮಕ್ಕೆ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.
ರಾಜು ಕುಲಕಣ ð, ಅನೀಲ ಝಂಪಾ, ಅಮಿತ್ ಪಾಟೀಕಲ, ಸಂತೋಶ ಅಳ್ಳಗಿ, ಸುನಿಲ್ ಗವಳಿ, ಧರೇಶ ಉನ್ನದ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ್ರÃ ಶಾಂತೇಶ್ವರ ಟ್ರಸ್ಟ ಕಮೀಟಿ ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಲೆಕ್ಕ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ನಡೆಸುತ್ತಿರುವ ಧರಣ ೧೨ ನೇ ದಿನಕ್ಕೆ ಕಾಲಿಟ್ಟಿದೆ.