108 ದಿನ ಶ್ರೀ ಸಿದ್ದೇಶ್ವರ ಶ್ರೀಗಳ ಜಪಯಜ್ಞ
ಇಂಡಿ: 108 ದಿನಗಳ ಕಾಲ ಶ್ರೀ ಸಿದ್ದೇಶ್ವರ ಜಪಯಜ್ಞ ಹಾಗೂ ನುಡಿ ನಮನ ಕಾರ್ಯಕ್ರಮ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜರುಗುತ್ತೆದೆ ಎಂದು ಗುರುದೇವಾಶ್ರಮದ ಪೀಠಾಧಿಪತಿ ಈಶ ಪ್ರಸಾದ ಶ್ರೀಗಳು ಹೇಳಿದರು
ತಾಲೂಕಿನ ಅಥರ್ಗಾ ಗ್ರಾಮದ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ 108 ದಿನಗಳ ಕಾಲ ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ
ಶ್ರೀಗಳ ದಿವ್ಯ ಚರಣಗಳಿಗೆ ಜಪಯಜ್ಞ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ ಎಂದು ಗುರುದೇವಾಶ್ರಮದ ಪೀಠಾಧಿಪತಿ ಈಶ ಪ್ರಸಾದ ಶ್ರೀಗಳು ಹೇಳಿದರು.
ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ. 17 ರಿಂದ 2 ಜನೇವರಿ 2024 ರ ವರೆಗೆ 108 ದಿನಗಳ ಕಾಲ ಸಾಯಂಕಾಲ 6 ರಿಂದ 7 ಗಂಟೆಯ ವರೆಗೆ ಜಪಯಜ್ಞ ಜರುಗುವದು.
ಸಾಯಂಕಾಲ 7 ರಿಂದ 8 ರ ವರೆಗೆ ನಾಡಿನ ಸಾಧಕ ಶ್ರೇಷ್ಠರು, ಪೂಜ್ಯರು ಶ್ರೀ ಸಿದ್ಧೇಶ್ವರ ಶ್ರೀಗಳ
ಕುರಿತು ಮಾತನಾಡುವರು ಎಂದರು.
ಸದರಿ ಕಾರ್ಯಕ್ರಮಕ್ಕೆ ಬಾಬಾರಾಮದೇವ, ಸುತ್ತೂರ
ಮಠದ ಶಿವರಾಜ ದೇಶಿಕೇಂದ್ರ ಶ್ರೀಗಳು, ಗುರುರಾಜ
ಕರ್ಜಗಿ, ಶಂಕರ ಬಿದರಿ ಸೇರಿದಂತೆ ಅನೇಕ ಗಣ್ಯರು
ಪಾಲ್ಗೊಳ್ಳುವರು. ಅದಲ್ಲದೆ 100 ದಿನಗಳ ಕಾಲ ಜಪಯಜ್ಞ ನುಡಿನಮನ ಕಾರ್ಯಕ್ರಮ, ನಂತರದ ಎಂಟು ದಿನಗಳಲ್ಲಿ ನುಡಿನಮನ ಸೇರಿ 108 ಶಿಕ್ಷಕರನ್ನು, 108 ಯೋಧರಿಗೆ, 108 ಸಾಧಕರಿಗೆ, 108 ಪೂಜ್ಯರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಪೂಜ್ಯ ಸಿದ್ಧೇಶ್ವರ ಶ್ರೀಗಳು ಒಂದುವರೆ ವರ್ಷದ ಹಿಂದೆ ಅಥರ್ಗಾಕ್ಕೆ ಬಂದಾಗ ಒಂದು ಗಿಡನೆಟ್ಟಿದ್ದರು. ಅವರ ನೆನಪಿಗಾಗಿ ಆ ಗಿಡ ರಕ್ಷಣೆಯ ಜೊತೆಗೆ ಅಲ್ಲಿ 4 ಎಕರೆ ಜಾಗದಲ್ಲಿ ಗುರುದೇವ ವನಸಿರಿ, ಅದಲ್ಲದೆ ಗುರುದೇವ ಕೃಪಾ ಸದನ ಉದ್ಘಾಟನೆ, ಗುರುದೇವ ಪ್ರವಚನ ಮಂಟಪ, 108 ಜನರು ಕುಳಿತು ಧ್ಯಾನ ಮಾಡುವ ಧ್ಯಾನ ಮಂದಿರದ ಉಧ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಂಕರಾನಂದ ಶ್ರೀಗಳು,ಅಥರ್ಗಾ ತಾ.ಪಂ ಮಾಜಿ ಸದಸ್ಯ ಗಣಪತಿ ಬಾಣಿಕೋಲ ಮಾತನಾಡಿದರು