ಲಿಂಬೆಗೆ ₹1000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಆಗ್ರಹ..!
ಇಂಡಿ: ನಿಂಬೆ ಬೆಳೆಗೆ ಉತ್ತಮ ಬೆಲೆಯ ಜೊತೆಗೆ ನಿಂಬೆಯಿAದ ತಯಾರಾಗುವ ಉಪ ಉತ್ಪನ್ನಗಳ ಕಾರ್ಖಾನೆ ಸ್ಥಾಪನೆ ಸೇರಿದಂತೆ ನಿಂಬೆ ಬೆಳೆಗಾರರ ವಿವಿಧ ಸಮಸ್ಯೆಗೆ ಸರಕಾರ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿ ನೂರಾರು ನಿಂಬೆ ಬೆಳೆಗಾರರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಒಂದು ಡಾಗ್ ನಿಂಬೆ ರಸ್ತೆಗೆ ಸುರಿವಿ ಮಂಗಳವಾರ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾವಿ ಅವರಿಗೆ ಮನವಿ ಸಲ್ಲಿಸಿದರು.
ಒಂದು ಡಾಗ್ ನಿಂಬೆಗೆ ೨೫೦೦ ರೂ, ಬೆಂಬಲ ಬೆಲೆ ಘೋಷಣೆ ಮಾಡಬೇಕು, ನಿಂಬೆ ಅಭಿವೃದ್ಧಿ ಮಂಡಳಿಯಿAದ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಬೇಕು, ಬೇಸಿಗೆಯ ಸಂದರ್ಭದಲ್ಲಿ ನೀರಿನ ಕೊರತೆ ಅನುಭವಿಸುವ ನಿಂಬೆ ಬೆಳೆಗಾರ ರೈತರಿಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎನ್ನುವ ಪ್ರಮುಖ ಬೇಡಿಗೆಳನ್ನು ಈ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ, ನಿಂಬೆ ಬೆಳೆಗಾರ ರೈತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಯ ಮೆರವಣಿಗೆ ಮಾಡಿ ಕೊನೆಗೆ ಇಂಡಿ ನಗರದ ಮಿನಿ ವಿಧಾನ ಸೌಧಕ್ಕೆ ತಲುಪಿದರು.
ಅಲ್ಲಿ ಸಭೆಯಾಗಿ ಮಾರ್ಪಟ್ಟು ಅನೇಕ ರೈತ ಮುಖಂಡರು ಮಾತನಾಡಿ ಸರಕಾರದ ಬಗ್ಗೆ, ದಲ್ಲಾಳಿಗಳ ಬಗ್ಗೆ, ರೈತ ನಿಂಬೆ ಬೆಳೆ ಸಂರಕ್ಷಣೆ ಮಾಡಿ ನಿಂಬೆ ಹರಿದು ಡಾಗ್ ತುಂಬುವವರೆಗಿನ ಕಷ್ಟದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ರೈತ ಸಂಘದ ಅಧ್ಯಕ್ಷ ಎಸ್.ಎಸ್.ಕೆಂಬೋಗಿ, ಎ.ಎಸ್.ಪಟೇಲ, ಕಾಸುಗೌಡ ಬಿರಾದಾರ, ಬಿ,ಡಿ. ಪಾಟೀಲ, ಶ್ರೀಶೈಲಗೌಡ ಪಾಟೀಲ, ಅನೀಲ ಜಮಾದಾರ, ಎಸ್.ಟಿ.ಪಾಟೀಲ, ಶಂಕರಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಬಾಳು ಮುಳಜಿ ಮುಂತಾದ ಪ್ರಗತಿಪರ ರೈತರು ಮಾತನಾಡಿ, ನಿಂಬೆ ಬೆಳೆ ಬೆಳೆಸಬೇಕಾದರೆ ಕನಿಷ್ಟ ೫ ರಿಂದ ೬ ವರ್ಷ ಕಾಯಬೇಕು. ನಂತರವೇ ಫಲ ನೀಡುತ್ತದೆ. ೬ ವರ್ಷಗಳ ಕಾಲ ನಿಂಬೆ ಬೆಳೆಗಾರ ಬೆಳೆಸಿದ ನಿಂಬೆಗೆ ಕನಿಷ್ಟ ಬೆಂಬಲ ಬೆಲೆ ಸಿಕ್ಕಾಗ ಮಾತ್ರ ಆ ರೈತ ಉಳಿಯತ್ತಾನೆ.
ನಮ್ಮ, ನಿಂಬೆಗೆ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಕಾರಣ ನಮ್ಮ ನಿಂಬೆಯನ್ನು ವಿದೇಶಿ ಮಾರುಕಟ್ಟೆಗೆ ಪರಿಚಯಿಸಬೇಕು. ನಮ್ಮ ನಗರದಲ್ಲಿಯೇ ರಾಜ್ಯ ನಿಂಬೆ ಬೆಳೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದೆ. ಅದಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿಗಳನ್ನು ಒದಗಿಸಿ, ಸಾಕಷ್ಟು ಅನುದಾನ ನೀಡಿ, ನಿಂಬೆ ಬೆಳೆಗಾರ ರೈತರಿಗೆ ನಿಂಬೆ ಬೆಳೆಯಲ್ಲಿ ಅಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳುವಂತೆ ತರಬೇತಿಗಳನ್ನು ಆಯೋಜಿಸಬೇಕು, ನಿಂಬೆ ಬೆಳೆಯಿಂದ ಬೈ ಪ್ರೊಡಕ್ಟ್ ಮಾಡಲು ಇಲ್ಲಿಯೇ ಬೃಹತ್ ಪ್ರಮಾಣದ ಕಾರ್ಖಾನೆ ಸಿದ್ದಪಡಿಸಬೇಕು ಎಂದು ಆಗ್ರಹಿಸಿದ ರೈತರು ಎಸಿ ಅವರಿಗೆ ಮನವಿ ಪತ್ರ ನೀಡಿದರು.
ಮನವಿ ಪತ್ರ ಸ್ವೀಕರಿಸಿದ ಎಸಿ ಚಿದಾನಂದ ಗುರುಸ್ವಾಮಿ ಮಾತನಾಡಿ, ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವದಾಗಿ ಭರವಸೆ ನೀಡಿದರು.
ಸರಕಾರ ಕೂಡಲೆ ನಿಂಬೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು. ನಿಂಬೆ ಅಭಿವೃಧ್ಧಿ ಮಂಡಳಿಗೆ ೧ ಸಾವಿರ ಕೋಟಿ ಅನುದಾನ ಒದಗಿಸಿ, ಅಭಿವೃಧ್ಧಿ ಮಂಡಳಿ ಮುಖಾಂತರ ರೈತರ ನೆರವಿಗೆ ಧಾವಿಸಬೇಕು.
ಕಾಸುಗೌಡ ಬಿರಾದಾರ, ರೈತ ಮುಖಂಡ.
ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ದೇವೇಂದ್ರ ಕುಂಬಾರ, ಯಮುನಾಜಿ ಸಾಳುಂಕೆ, ಯುವರಾಜಗೌಡ ಪಾಟೀಲ, ಅಕ್ತಾರ ಪಟೇಲ, ಎಸ್.ಪಿ.ಪಾಟೀಲ. ಸಿದ್ದಪ್ಪ ತಳವಾರ, ಮಹಾದೇವ ಗುಡ್ಡೊಡಗಿ, ನಾಗನಾಥ ಬಿರಾದಾರ, ಶಿವರಾಜ ಕೆಂಗನಾಳ, ಶಿವಶರಣ ಹಂಜಗಿ, ಅಯೂಬ ನಾಟೀಕಾರ, ರಾಘವೇಂದ್ರ ಕಾಪ್ಸೆ, ಡಾ. ರಮೇಶ ರಾಠೋಡ, ಸಿದ್ದು ಡಂಗಾ, ದೇವೇಂದ್ರ ಕುಂಬಾರ, ನಿಯಾಜ್ ಅಗರಖೇಡ, ಜಗನ್ನಾಥ ಇಂಡಿ, ಸುನೀಲಗೌಡ ಬಿರಾದಾರ, ಅಶೋಕ ಅಕಲಾದಿ, ಮಂಜು ದೇವರ, ಸೋಮು ನಿಂಬರಗಿಮಠ, ಮೈಬೂಬ ಬೇವನೂರ, ಅಪ್ಪು ಮಂಗಳೂರ, ಅದೃಶ್ಯಪ್ಪ ವಾಲಿ, ಸುಭಾಸ ಪಾಟೀಲ, ಲಕ್ಕಿ ಲಚ್ಯಾಣ, ಯಶವಂತ ಕಾಡೇಗೋಳ, ಸುದರ್ಶನ ಉಪಾಧ್ಯಯ, ಫಜಲು ಮುಲ್ಲಾ, ಅಂಬಣ್ಣ ಸುಣಗಾರ, ಪುಟ್ಟು ಮರಡಿ, ಜೆಟ್ಟೆಪ್ಪ ಸಾಲೋಟಗಿ, ಸಿದ್ದಪ್ಪ ಗುನ್ನಾಪೂರ, ಕೆಂಚಪ್ಪ ನಿಂಬಾಳ, ಬಾಬು ಮೇತ್ರಿ, ಈರಪ್ಪ ಮಾಳಿಂಗೆ, ಸಂಜು ಧಶವಂತ, ಬಾಳು ರಾಠೋಡ, ಶ್ರೀಶೈಲ ವಿಜಯಪೂರ, ಗಜಾನಂದ ಗಿಣ್ಣಿ ಸೇರಿದಂತೆ ಸುಮಾರು ಐನೂರಕ್ಕೂ ಹೆಚ್ಚು ರೈತರು ಪ್ರತಿಭೌಟನೆಯಲ್ಲಿ ಪಾಳ್ಗೊಂಡಿದ್ದರು.
ಇಂಡಿ: ನಗರದ ಮಿನಿ ವಿಧಾನಸೌಧದ ಮುಂದೆ ಮಂಗಳವಾರ ರೈತ ಮುಖಂಡರು ನಡೆಸಿದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಸಿ ಚಿದಾನಂದ ಗುರುಸ್ವಾಮಿ ಅವರಿಗೆ ನಿಂಬೆ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ, ರೈತರು ಮನವಿ ಪತ್ರ ಸಲ್ಲಿಸಿದರು.



















