೧೧ ರಂದು ಮುದ್ದೇಬಿಹಾಳದಲ್ಲಿ ಬೃಹತ್ ಹಿಂದೂ ಸಮ್ಮೇಳನದ, ಬೃಹತ್ ಹಿಂದೂ ಶೋಭಾಯಾತ್ರೆ
ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು
ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ
ಮುದ್ದೇಬಿಹಾಳ : ಹಿಂದೂ ಸಮಾಜ ಜಾತಿ ಧರ್ಮ ಮತ ಪಂಗಡಗಳ ಹೆಸರಿನಲ್ಲಿ ವಿಭಜನೆಯಾಗುತ್ತಿದ್ದು ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಬೃಹತ್ ಹಿಂದೂ ಸಮ್ಮೇಳನ ಮಾಡಲಾಗುತ್ತಿದೆ ಈ ಬೃಹತ್ ಸಮ್ಮೇಳನದ ಯಶಸ್ವಿ ಗೆ ಪ್ರತಿಯೊಂದು ಹಿಂದೂ ಸಮಾಜದವರು ಮುಂದೆ ಬರಬೇಕು ಎಂದು ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಮುದ್ದೇಬಿಹಾಳ ಮಂಡಲದ ಪದಾಧಿಕಾರಗಳಾದ ಡಾ.ಪರಶುರಾಮ ಪವಾರ್, ಪ್ರಭು ಕಡಿ, ಡಾ.ವಿರೇಶ ಪಾಟೀಲ ಹೇಳಿದರು ಶುಕ್ರವಾರ ಪಟ್ಟಣದ ಹುಡ್ಕೂ ಬಡಾವಣೆಯ ನಾವದಗಿ ಅವರ ನಿವಾಸದಲ್ಲಿರುವ ಹಿಂದೂ ಸಮ್ಮೇಳನ ಸಮಿತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು
ಹಿಂದೂ ಧರ್ಮದ ಅನೇಕ ವೀರಾಗ್ರಾಣಿಯರು ಧರ್ಮಯೋಧರು ಋಷಿಮುನಿಗಳು ಸಂತರು ನಮ್ಮ ದೇಶ ಮತ್ತು ಹಿಂದೂ ಧರ್ಮದ ಉಳುವಿಗೆ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ ರಾಜಕೀಯ ಅಧಿಕಾರದ ಲಾಲಸೆಗೆ ದೇಶವಿಭಜನೆ ಆಗಬೇಕಾಯಿತು ಬಲಿಷ್ಠ ದೇಶವನ್ನು ನಾವು ಮುಂದಿನ ಪೀಳಿಗೆಗೆ ಮತಾಂತರ ಭಯೋತ್ಪಾದನೆ, ಆಂತರಿಕ ಕಚ್ಚಾಟ ದ್ವೇಶಗಳಿಂದಮುಕ್ತಗೂಳಸಿ ನೀಡಲು ಹಿಂದೂ ಸಮಾಜ ಹಿಂದೂಗಳು ಒಂದಾಗಬೇಕಿದೆ ಈ ನಿಟ್ಟಿನಲ್ಲಿ ಸಂಘಟಿತ ಹಿಂದೂ ಸಮಾಜ ಒಂದಾಗಿಸಲು ಸಮ್ಮೇಳನ ಮಾಡಲಾಗುತ್ತಿದೆ ಈಗಾಗಲೇ ಮಾತಾ ಭಗನಿಯರು ಸಮಿತಿಯ ಸಂಚಾಲಕರು ಪ್ರತಿಹಿಂದೂಗಳ ಮನೆಮೆನೆಗೆ ಆಮಂತ್ರಣವನ್ನು ತಿಲಕವಿಟ್ಟು ನೀಡಿದ್ದಾರೆ ಹಿಂದೂ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಅಂದಾಜು 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಸಮ್ಮೇಳನದ ವೇದಿಕೆಯಲ್ಲಿ 50 ಹೆಚ್ಚು ವಿವಿಧ ಸಮಾಜದ ಅಧ್ಯಕ್ಷ ರು ಇರಲಿದ್ದಾರೆ ದಿವ್ಯ ಸಾನಿಧ್ಯ ಮುದ್ದೇಬಿಹಾಳ ತಾಳಿಕೋಟೆ ಖಾಸ್ಗತೇಶ್ವರಮಠದ ಶ್ರೀ ಸಿದ್ದಲಿಂಗದೇವರು ,ಅಧ್ಯಕ್ಷತೆಯನ್ನು ಬಸವರಾಜ ನಾವದಗಿ, ದಿಕ್ಸೂಚಿ ಭಾಷಣವನ್ನು ಮುಖ್ಯ ವಕ್ತಾರ ಹಣಮಂತ ಮಳಲಿ ಮಾಡಲಿದ್ದಾರೆ ಎಂದು ವಿವರಿಸಿದರು.
ಈ ಸಮ್ಮೇಳನದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರು ಸಹ ಭಾಗವಹಿಸಬಹುದು ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರು ಹಿಂದೂಗಳೇ ಆಗಿದ್ದಾರೆ ಈ ಸಮ್ಮೇಳನ ಪಕ್ಷಾತೀತ ಜಾತ್ಯಾತೀತ ಸಮ್ಮೇಳನವಾಗಿದೆ ಎಂದರು.
ರಾಜೇಂದ್ರ ಭೋಸಲೆ ಮಾತನಾಡಿ ಹಿಂದೂ ಒಂದು ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಹಿಂದೂಗಳನ್ನು ಒಡೆದಾಳುವ ನೀತಿ ಹೆಚ್ಚಾಗುತ್ತಿದೆ ಶಿಕ್ಷಣದಿಂದ ಜಾತೀಯತೆ ದೂರಾಗುತ್ತದೆ ಎನ್ನುವ ಕಾಲವಿತ್ತು ಆದರೆ ಈಗ ಅತಿ ಶಿಕ್ಷಣವಂತರಿಂದ ಜಾತೀಯತೆ ಹೆಚ್ಚಾಗಿದೆ ವಿಷಾಧಿಸಿದ ಅವರು ಎಲ್ಲರೂ ಒಂದಾಗಿ ಕಾರ್ಯಕ್ರಮ ಯಶಸ್ವಿಗೂಳಸಿಬೇಕೆಂದು ಕರೆ ನೀಡಿದರು
ಈ ವೇಳೆ ಸಮಿತಿಯ ಉಪಾಧ್ಯಕ್ಷ ಅಶೋಕ ಮಣಿ ಹಾಗೂ ದಾನಯ್ಯ ಹಿರೇಮಠ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭುರಾಜ ಕಲಬುರಗಿ, ಮಾಣಿಕಚಂದ ದಂಡಾವತಿ, ಸುನಿಲ್ ಇಲ್ಲೂರ, ಎಸ್ ಆರ್ ಕುಲಕರ್ಣಿ, ರಾವಸಾಬ ದೇಸಾಯಿ, ಸಂಗಮೇಶ ನಾವದಗಿ,ನಿಂಗರಾಜ ಮಹೇಂದ್ರಕರ, ಮಲ್ಲಣ್ಣ ಪತ್ತಾರ, ರಾಜು ಬಳ್ಳೊಳ್ಳಿ, ಪ್ರಭು ನಂದೆಪ್ಪನವರ,ಪ್ರಭು ಪವಾರ ಸೇರಿದಂತೆ ಹಲವು ಸಮಾಜದ ಅಧ್ಯಕ್ಷರು ಮುಖಂಡರು ಭಾಗವಹಿಸಿದ್ದರು.
ಬಾಕ್ಸ್; ಬೃಹತ್ ಹಿಂದೂ ಸಮ್ಮೇಳನದ ಬೃಹತ್ ಶೋಭಾಯಾತ್ರೆ ಜ. ೧೧ ರವಿವಾರ ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಆರಂಭವಾಗಿ ಪ್ರಮುಖ ರಸ್ತೆ ವೃತ್ತಗಳ ಮೂಲಕ ವಿಬಿಸಿ ಹೈಸ್ಕೂಲ್ ತಲುಪಲಿದೆ ಈ ಶೋಭಾಯಾತ್ರೆಯಲ್ಲಿ ಎಲ್ಲಾ ಸಮಾಜದ ದಾರ್ಶನಿಕ ರ ಭಾವಚಿತ್ರ ಮೆರವಣಿಗೆ ಸಕಲಮಂಗಲವಾಧ್ಯಗಳೂಂದಿಗೆ ಕಲಾತಂಡಗಳೂಂದಿಗೆ ಮಾಡಲಾಗುತ್ತದೆ.
ಸಾಯಂಕಾಲ 5.15 ಕ್ಕೆ ಬೃಹತ್ ಹಿಂದೂ ಸಮ್ಮೇಳನ ವಿಬಿಸಿ ಹೈಸ್ಕೂಲ್ ಮೈದಾನದ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಜರುಗಲಿದೆ.


















