ಮಾರಕಸ್ತ್ರದಿಂದ ಯುವಕನನ್ನು ಕೊಚ್ಚಿ ಕೊಲೆ..! ಅಯ್ಯೋ..!
ಅಫಜಲಪುರ: ಇತ್ತೀಚೆಗೆ ಚವಡಾಪುರ ಗ್ರಾಮದಲ್ಲಿ ನಡೆದ ಭೀಕರ ಕೊಲೆಯ ಘಟನೆ ಮರೆಮಾಚುವ ಮುನ್ನವೇ ತಾಲೂಕಿನ ಸಿಧನೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಭೀಕರ ಕೊಲೆ ನಡೆದಿದೆ.
ಸಿಧನೂರ ಗ್ರಾಮದ ಬಲಭೀಮ ಸಗರ (23) ಎಂಬ ಯುವಕ ಕೊಲೆಗೀಡಾದ ದುರ್ದೈವಿಯಾಗಿದ್ದಾನೆ. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಸೇರಿ ಬೇಲ್ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ ಎನ್ನಲಾಗಿದೆ. ಕಲಬುರಗಿ ನಗರದಲ್ಲಿ ವಾಸವಾಗಿದ್ದ ಬಲಭೀಮ, ದಸರಾ ಹಬ್ಬದ ಹಿನ್ನೆಲೆ ಸಿಧನೂರ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಬರ್ಬರವಾಗಿ ಹತ್ಯೆಯಾಗಿಯಾಗಿದ್ದಾನೆ. ಹಳೆಯ ವೈಷ್ಯಮ್ಯ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ ಗೋಪಿ ಬಿ.ಆರ್, ಸಿ.ಪಿ.ಐ ಪಂಡಿತ ಸಗರ, ಪಿ.ಎಸ್.ಐ ಗಳಾದ ಸವಿತಾ ಕಲ್ಲೂರ, ಮಡಿವಾಳಪ್ಪ ಬಾಗೋಡಿ, ರಾಹುಲ ಪವಾಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ರೇವೂರ(ಬಿ) ಠಾಣೆಯ ಪೊಲೀಸರು ಹೊನ್ನಪ್ಪ ಹೇರೂರ, ಯಲ್ಲಾಲಿಂಗ ಹೇರೂರ, ಮಾಳಪ್ಪ ಹೇರೂರ
ಎಂಬ ಮೂರು ಜನ ಆರೋಪಿಗಳನ್ನು ವಶಕ್ಕೆ
ಪಡೆದು ತನಿಖೆ ಮುಂದುವರಿಸಿದ್ದಾರೆ.
ವರದಿ : ಉಮೇಶ್ ಅಚಲೇರಿ ಅಪಜಪುರ/ ಕಲ್ಬುರ್ಗಿ