ಬೆಂಗಳೂರು : ನೀರಾವರಿ ವಂಚಿತ ಪ್ರದೇಶಗಳ ಮತ್ತು ನೀರಾವರಿ ಇಲಾಖೆಯ ಜಲ್ವಂತ್ ಸಮಸ್ಯೆಗಳ ಬಗ್ಗೆ ಪ್ರಸ್ತಾವನೆ ಮಾಡಿದ ಇಂಡಿ ಮತ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್
ಬೆಂಗಳೂರಲ್ಲಿ ಆಯೋಜನೆಗೊಂಡ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಪ್ರಗತಿ ಪರಶೀಲನಾ ಸಭೆಯು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಇಂಡಿ ಮತ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಮಾತಾನಾಡಿ, ರೇವಣಸಿದ್ಧೇಶ್ವರ ಏತ ನೀತಾವರಿ ಅನುಷ್ಠಾನಗೊಳಿಸುವುದು. ಗುತ್ತಿ ಬಸವಣ್ಣ ನೀರಾವರಿ ಯೋಜನೆಗೆ ಪಂಪ ಇಲ್ಲದೇ ಕೋನೆಯ ಭಾಗಕ್ಕೆ ನೀರು ಹರಿಯುತ್ತಾಯಿಲ್ಲ. ಕೇವಲ ಎರಡು ಪಂಪುಗಳು ಮಾತ್ರ ಚಾಲಿತಿಯಲ್ಲಿವೆ. ಹೀಗಿದ್ದಾಗ ಕೊನೆಯ ಭಾಗದ ಜನ ಜಾನುವಾರು ಗಳಿಗೆ ನೀರಿನ ತೊಂದರೆ ಆಗುತ್ತಿದೆ. ಕೂಡಲೇ 8 ಪಂಪು ಏಕ ಕಾಲದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ರೆ ಮಾತ್ರ, ಸ್ವಲ್ಪ ಪ್ರಮಾಣ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತಿದೆ. ಇಂಡಿ ಶಾಖಾ ಕಾಲುವೆ 64 ರಿಂದ 172 ಕಿ.ಮೀ ನವೀಕರಣ ಗೊಳ್ಳಬೇಕು ಎಂದರು. ನಮ್ಮ ಪ್ರದೇಶ ಮೊದಲೇ ಬರಗಾಲದ ಪ್ರದೇಶವಾಗಿದ್ದು ಇದೆ. ಈ ಹಿಂದೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಮತ್ತೇ ಮಳೆ ಕೊರತೆಯಾಗಿದೆ. ಇಂಡಿ ತಾಲ್ಲೂಕಿನ 16 ಚಿಕ್ಕ ನೀರಾವರಿ ಕೆರೆಗಳನ್ನು ಕೆರೆ ತುಂಬುವ ಯೋಜನೆಗೆ ಈಆರ್‌ಸಿ ಸಮಿತಿಯಲ್ಲಿ ಅನುಮೋದಸಿ ಟೆಂಡರ್ ಪ್ರಾರಂಭಿಸುವ ಬಗ್ಗೆ ಸೇರಿದಂತೆ ನಿರಾವರಿಯ ಜಲ್ವಂತ್ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.