ಬೆಂಗಳೂರು: ಹಳ್ಳಿ ಸೊಗಡಿನ ಕನ್ನಡದ ಹುಡುಗ ಯಲ್ಲಪ್ಪ ಮೌರ್ಯ ಪೂಜಾರಿಗೆ ಪ್ಯಾಶನ್ ಡಿಸೈನರ್ ಸಾಧಕರಿಗೆ ನಿಡುವ ಸಾಧನ ರತ್ನ ಪ್ರಶಸ್ತಿಗೆ ಭಾಜನಾರುಗುವ ಮೂಲಕ ಗ್ರಾಮೀಣ ಪ್ರತಿಭೆ ರಾಜ್ಯದಾನಿಯಲ್ಲಿ ಮಿಂಚಿದ್ದು ವಿಶೇಷವಾಗಿದೆ.
ಹೌದು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದವರಾದ ಯಲ್ಲಣ್ಣ ಬೀಮಪ್ಪ ಮೌರ್ಯ ಪೂಜಾರಿಯವರು ಸತತ ಪ್ರಯತ್ನದ ಮೂಲಕ ಮೇಲೆತ್ತರಕ್ಕೆ ಬೆಳೆದ ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ.
ಫ್ಯಾಷನ್,ಫೊಟೊಗ್ರಪಿ,ಪತ್ರಿಕೋದ್ಯಮ ಕ್ಷೇತ್ರ ಸೇರಿ ಅನೇಕ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಬೆಂಗಳೂರಿನ ಎಸ್ಎಸ್ ಕಲಾಸಂಗಮ ಆಯೋಜನೆ ಮಾಡಿರುವ ಫ್ಯಾಶನ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಧನ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇವರು ಹಲವಾರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರೂಪಕರಾಗಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಈಗಾಗಲೇ ನಮ್ಮೂರ ನಕ್ಷತ್ರ ,ಬಸವ ಪ್ರಶಸ್ತಿ, ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಭಾಜನ ಆಗಿರುವದು ವಿಶೇಷವಾಗಿದೆ. ಪೂಜಾರಿ ಅವರು ಕೊರೊನಾ ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಆಹಾರ ಹಾಗೂ ಔಷಧಿ ಕಿಟ್ ವಿತರಣೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಕಲಾ ಸಂಗಮದ ಸಂಸ್ಥಾಪಕ ಅಧ್ಯಕ್ಷ ಸ್ಮೈಲ್ ಶಿವು ಹಾಗೂ ಭಾರತ ಸಾರಥಿ ಪತ್ರಿಕೆಯ ಗಂಡಸಿ ಸದನಂದ ಸ್ವಾಮಿ ಮತ್ತು ಚಲನಚಿತ್ರ ನಟರು ಸಮಾಜ ಸೇವಕರು ಉಪಸ್ಥಿತರಿದ್ದರು.