ಕುಸ್ತಿಯಲ್ಲಿ ಕಂಚಿನ ಪದಕ ಪಡೆದ ಇಂಡಿಯ ಯುವಕ, ಯುವತಿ..!
ಇಂಡಿ : ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಅಮೊಘಿಸಿದ್ದ ಅಡಿವೆಪ್ಪ ಬಿರಾದಾರ ಹಾಗೂ ಭಾಗ್ಯಶ್ರೀ ಕರಾಳೆ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದು ತಾಲೂಕಿನ ಕಿರ್ತಿ ಹೆಚ್ಚಿಸಿದ್ದಾರೆ.
ಹೌದು ಬಾಗಲಕೊಟ ಜಿಲ್ಲೆಯ ಮುಧೋಳ್ ದಲ್ಲಿ ನಡೆದಿರುವ ರಾಜ್ಯ ಮಟ್ಟದ 68 ಕೆಜಿ ತೂಕದ ಕುಸ್ತಿ ಪಂದ್ಯಾವಳಿ ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ವಿಧ್ಯಾರ್ಥಿ ಅಮೊಘಿಸಿದ್ದ ಅಡಿವೆಪ್ಪ ಬಿರಾದಾರ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾನೆ. ಅದಲ್ಲದೇ ತಾಲೂಕಿನ ಲಚ್ಯಾಣ ಗ್ರಾಮದ ಎಸ್ ಎಸ್ ಅಗ್ರಿ ಶಾಲೆಯ ವಿಧ್ಯಾರ್ಥಿನಿ ಭಾಗ್ಯಶ್ರೀ ಕರಾಳೆ ಇತಳು ಸಹ 68 ಕೆಜಿ ತೂಕದ ಕುಸ್ತಿ ವಿಭಾಗದಲ್ಲಿ ತೃತಿಯ ಸ್ಥಾನ ಪಡೆದ ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾರೆ.
ಇನ್ನೂ ಈ ಇರ್ವರ ಸಾಧಕರನ್ನು ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ನಡೆದಿರುವ ತಾಲೂಕಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಜೊತೆಗೆ ಶಾಲೆಯ SDMC ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗದ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.