ಇಂಡಿಯ ಜಿ ಆರ್ ಜಿ ಕಲಾ ಮಹಾವಿದ್ಯಾಲಯದಲ್ಲಿ ವಿಶ್ವ” “ಭೂಮಿ ದಿನಾಚರಣೆ
ಇಂಡಿ : “1970 ಏಪ್ರಿಲ್ 22 ರಂದು ಮೊದಲ ಬಾರಿಗೆ ಭೂಮಿ ದಿನವನ್ನು ಆಚರಿಸಲಾಯಿತು. ವಿಶ್ವ ಶಾಂತಿಗಾಗಿ ಹೋರಾಟ ನಡೆಸಿದ್ದ ಜಾನ್ ಮೆಕ್ ಕಾನ್ನೆಲ್ ಮಾತೃಭೂಮಿ ಹಾಗೂ ಶಾಂತಿಯ ಪರಿಕಲ್ಪನೆಯನ್ನು ಗೌರವಿಸುವ ಉದ್ದೇಶದಿಂದ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಅಮೆರಿಕದ ಸೆನೆಟರ್, ಗೇಲಾರ್ಡ್ ನೆಲ್ಸನ್ ಪ್ರಪಂಚದಾದ್ಯಂತ ಪರಿಸರದ ಬಗ್ಗೆ ಜಾಗೃತಿ
ಮೂಡಿಸುವ ಉದ್ದೇಶದಿಂದ ಏಪ್ರಿಲ್ 22, 1970 ರಂದು
ಆಚರಿಸಲು ಪ್ರಸ್ತಾಪಿಸಿದರು. ಮತ್ತು ‘ವಿಶ್ವ ಭೂಮಿ ದಿ
ನʼ ಎಂದು ಮರುನಾಮಕರಣ ಮಾಡಿದರು.” ಎಂದು
ಉಪನ್ಯಾಸಕಿ ಶ್ವೇತಾ ಕಾಂತ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ
ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ
ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ವಿಭಾಗದ
ಅಡಿಯಲ್ಲಿ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ
ಜರುಗಿತು. ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ “ ವಿಶ್ವ ಭೂಮಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಪರಿಸರ ಕಾಳಜಿ ಹಾಗೂ ಭೂಮಿಯ ರಕ್ಷಣೆಯ ಕುರಿತು ಜಾಗೃತಿ
ಮೂಡಿಸುವ ಉದ್ದೇಶ ಈ ದಿನದ ಹಿಂದಿದೆ. ಹವಾಮಾನ
ಬದಲಾವಣೆಯ ಪ್ರಾಮುಖ್ಯತೆ ಮತ್ತು ನಮ್ಮ
ಪರಿಸರವನ್ನು ರಕ್ಷಿಸುವ ಮಾರ್ಗಗಳ ಬಗ್ಗೆ
ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ವಿಶ್ವ
ಭೂಮಿ ದಿನವನ್ನು ‘ಅಂತರಾಷ್ಟ್ರೀಯ ಮಾತೃಭೂಮಿ ದಿನʼ ಎಂದೂ ಕರೆಯಲಾಗುತ್ತದೆ. ಈ ದಿನವು ಪ್ರಕೃತಿ ಹಾಗೂ ಗೃಹಗಳನ್ನು ರಕ್ಷಿಸುವ ಪ್ರಯತ್ನಗಳ ಮೇಲೂ
ಕೇಂದ್ರಿಕರಿಸುತ್ತದೆ.” ಎಂದು ಹೇಳಿದರು. ಡಾ. ಜಯಪ್ರಸಾದ ಡಿ, ಉಪನ್ಯಾಸಕಿ ಶೃತಿ ಪಾಟೀಲ,
ಶೃತಿ ಬಿರಾದಾರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಪಿ.ಕೆ.ರಾಠೋಡ, ಡಾ.ಸಿ. ಎಸ್. ಬಿರಾದಾರ, ಡಾ.ಶ್ರೀಕಾಂತ ರಾಠೋಡ ಮಲ್ಲಿಕಾರ್ಜುನ ಕೋಣದೆ, ಆರ್.ಪಿ.ಇಂಗನಾಳ, ಪಂಕಜ ಕುಲಕರ್ಣಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಕಲಾ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕಾಂತಾ ಮಾತನಾಡಿದರು.