ಮಹಿಳಾ ಜ್ಞಾನ ವಿಕಾಸ ಹಾಗೂ ವಿಚಾರಗೋಷ್ಠಿ
ಲಿಂಗಸೂಗೂರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು 1982ರಲ್ಲಿ ಪ್ರಾರಂಭಗೊಂಡು ಕಳೆದ 4 ದಶಕಗಳಿಂದ ಸಾಮಾಜಿಕ ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಹಾಗೂ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಗಣೇಶ್ ಬಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಲಾದ ರಾಜರ್ಷಿ ಡಾ|| ವೀರೇಂದ್ರ ಹೆಗ್ಗೆಡೆ ಮತ್ತು ಮಾತೃಶ್ರೀ ಡಾ||ಹೇಮಾವತಿ ವಿ.ಹೆಗ್ಗೆಡೆಯವರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿದಲ್ಲಿ ಮಾತನಾಡಿದರು.
ಈ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬ ಹಣೆಪಟ್ಟಿಯಿಂದ ಹೊರಬರಲು ನಮ್ಮ ಸಂಸ್ಥೆಯಡಿಯಲ್ಲಿ 10 ಜನ ಅತಿಥಿ ಶಿಕ್ಷಕರನ್ನು ತಿಂಗಳಿಗೆ 8 ಸಾವಿರ ರೂಪಾಯಿಗಳಂತೆ ವೇತನವನ್ನು ನೀಡಿ, ಶಿಕ್ಷಣ ಇಲಾಖೆಗೆ ಒದಗಣೆ ಮಾಡಲಾಗಿದೆ. ಹಾಗೆಯೇ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವ ಉದ್ಯೋಗ – ದಡಿಯಲ್ಲಿ 66 ಜನಕ್ಕೆ ಸುಮಾರು 2.50 ಕೋಟಿಯಷ್ಟು ಮೊತ್ತವನ್ನು ಸಿಡ್ನಿ ಸಮೃದ್ಧಿ ಯೋಜನೆಯಡಿಯಲ್ಲಿ ಖರ್ಚು ಮಾಡಲಾಗಿದೆ. ತಾಲೂಕಿನಲ್ಲಿ 2610 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈ ತಂಡದಲ್ಲಿ 20335 ಸದಸ್ಯರಿದ್ದಾರೆ. 42 ಜನರಿಗೆ ಪ್ರತಿ ತಿಂಗಳು 8 ನೂರು ರೂಪಾಯಿಯಂತೆ ನಿರ್ಗತಿಕರ ಮಾಶಾಸನ ವಿತರಣೆಯಾಗುತ್ತಿದೆ. 2 ಜನರಿಗೆ ವಾತ್ಸಲ್ಯ ಮನೆ ನಿರ್ಮಿಸಿ ಕೊಡಲಾಗಿದೆ. 360 ಜನ ಸದಸ್ಯರು ಸುಮಾರು 38 ಲಕ್ಷದಷ್ಟು ಆರೋಗ್ಯ ರಕ್ಷಾ ಕ್ರೈಮ್ ಪಡೆದಿರುತ್ತಾರೆ. ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಪಾಳುಬಿದ್ದ ದೇವಸ್ಥಾನಗಳ ಅಭಿವೃದ್ಧಿಗೆ ಕೈಗೆ ಹಣವನ್ನು ಮೀಸಲಿರಿಸಿದೆ. 23 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಕಾರ್ಯಕ್ರಮದಡಿಯಲ್ಲಿ ಶಿಷ್ಯವೇತನ ಮಂಜೂರು ಮಾಡಲಾಗಿದೆ. ಕಾರ್ಯಕ್ರಮದಡಿ ಆಯುಷ್ಮಾನ್ ಕಾರ್ಡ್ ನೋಂದಣಿ 9000 ಹೊಂದಿರುತ್ತಾರೆ. 1800 ಜನ ಪ್ಯಾನ್ ಕಾರ್ಡ ವಿತರಣೆಯಾಗಿವೆ ಎಂದು ತಿಳಿಸಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗ ಕೊಪ್ಪಳದ ಗಣೇಶ್ ಎಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘದ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ವ್ಯಾಪಾರ ಉದ್ದಿಮೆಗಳನ್ನು ಮಾಡುವ ಸದಸ್ಯರಿಗೆ ಸಿಡ್ಡಿ ಸಮೃದ್ಧಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ, ಕಳೆದ ಹತ್ತು ವರ್ಷಗಳಿಂದ ವಿಶೇಷವಾಗಿ ರೈತರ ಅನುಕೂಲಕ್ಕಾಗಿ ರೈತಕ್ಷೇತ್ರ ಪಾಠಶಾಲೆ 260 ಕಾರ್ಯಕ್ರಮಗಳು , ಸಂಘದ ಸದಸ್ಯರ ಮಹಿಳೆಯ – ರಿಗಾಗಿ 67 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಲಿಂಗಸೂರು ತಾಲೂಕಿನಲ್ಲಿ ಕುಡಿಯುವ ನೀರಿನ 4 ಕೆರೆಗಳು ಹೂಳೆತ್ತಲಾಗಿದೆ. ಆರೋಗ್ಯದ ಅರಿವು, ಕೌಟುಂಬಿಕ ಸಲಹೆ ಹಾಗೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವ ಸಲುವಾಗಿ ಗ್ರಂಥಾಲಯದ ವ್ಯವಸ್ಥೆ, ಸಾಮಾಜಿಕ ಚಟುವಟಿಕೆಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಗುರುತಿಸಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರ ಒದಗಣೆ, ಬೆಂಚ್ಚುಡೆಸ್ಕ್ ವಿತರಣೆ, ದೇವಸ್ಥಾನಗಳ ಜೀರ್ಣೋದ್ದಾರಕಾರ್ಯಕ್ರಮಗಳು, ಶುದ್ದಗಂಗಾ ಕುಡಿಯುವ ನೀರಿನ ವ್ಯವಸ್ಥೆ, ಹಸಿರು ಇಂಧನ ಕಾರ್ಯಕ್ರಮ, ವಿಮಾ ಕಾರ್ಯಕ್ರಮಗಳನ್ನು ಪಾಲುದಾರ ಬಂಧುಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕುಟುಂಬದಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಗಳು ಕುರಿತು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶಾಂತ ಪಾಟೀಲ್ , ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಯಾಣ ಕರ್ನಾಟಕ ವಿಭಾಗ ಕೊಪ್ಪಳದ ಶ್ರೀ ಗಣೇಶ್ ಬಿ ಪ್ರಾಸ್ತವಿಕವಾಗಿ ಮಾಹಿತಿ ನೀಡಿದರು ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್ ಗುರು ಬಸಪ್ಪ ಸಜ್ಜನ್ ಊರಿನ ಮುಖಂಡರು ನಬೀಸಾಬ್ ಎಮ್ ಕಂದಗಲ್ ಮುಖ್ಯ ಅಧಿಕಾರಿಗಳು ಪುರಸಭೆ ಮುದುಗಲ್ ಯೋಜನಾಧಿಕಾರಿ ಅಡಿವಯ್ಯ ಹಾಗೂ ಕೃಷಿ ಅಧಿಕಾರಿ ಮೊಹಮ್ಮದ್ ಅಲಿ ನಾಗಡದಿನ್ನಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರೀತಿ ವಿಜಕ್ಷಣಾಧಿಕಾರಿ ಗಣರಾಜ್ , ಮೇಲ್ವಿಚಾರಕರಾದ ಶರಣಬಸವ ಉಮೇಶ್ ಸೇವಾ ಪ್ರತಿನಿಧಿ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.