Women’s Asia Cup 2024 : Voice Of Janata :
ಭಾರತ Vs ಪಾಕ್ ಹೈವೊಲ್ಟೆಜ್ ಪಂದ್ಯ..!
ಏಷ್ಯಾಕಪ್ನಲ್ಲಿ ಭಾರತ vs ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಮಹಿಳಾ ಏಷ್ಯಾ ಕಪ್ 2024 ಜುಲೈ 19 ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ಕುತೂಹಲಕಾರಿ ಪಂದ್ಯ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಜುಲೈ 19 ರಂದು ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ. ನೀವು ಡಿಜಿಟಲ್ ಆಗಿ ನೋಡಲು ಬಯಸಿದರೆ, ನೀವು ಅದನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ನೋಡಬೇಕು.
ಈ ಪಂದ್ಯವು ‘ಎ’ ಗುಂಪಿನ ಭಾಗವಾಗಿ ನಡೆಯಲಿದೆ. ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ನೇಪಾಳ ತಂಡಗಳಿವೆ. ‘ಬಿ’ ಗುಂಪಿನಲ್ಲಿ ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳಿವೆ.
ಗುಂಪು ಹಂತದಲ್ಲಿ, ಪ್ರತಿ ತಂಡವು ತಮ್ಮ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ. ಎರಡೂ ಗುಂಪುಗಳಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆಯಲಿವೆ.
ತಂಡಗಳು: ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ ಶಫಾಲಿ ವರ್ಮಾ ಜಿಮಿಮಾ ರಾಡ್ರಿಗಸ್ ರಿಚಾ ಘೋಷ್ (ವಿಕೆಟ್ಕೀಪರ್) ಉಮಾ ಚೆಟ್ರಿ (ವಿಕೆಟ್ಕೀಪರ್) ಪೂಜಾ ವಸ್ತ್ರಕರ್ ದೀಪ್ತಿ ಶರ್ಮಾ ಅರುಂಧತಿ ರೆಡ್ಡಿ ರೇಣುಕಾ ಸಿಂಗ್ ಡಿ. ಹೇಮಲತಾ ಆಶಾ ಶೋಭನಾ ರಾಧಾ ಯಾದವ್ ಶ್ರೇಯಾಂಕಾ ಪಾಟೀಲ ಸಜೀವನ್ ಸಜನಾ.
ಪಾಕಿಸ್ತಾನ: ನಿದಾ ಧಾರ್(ನಾಯಕಿ) ಅಲಿಯಾ ರಿಯಾಜ್ ಡೈನಾ ಬೇಗ್ ಫಾತಿಮಾ ಸನಾ ಗುಲ್ ಫಿರೋಜಾ ಇರಂ ಜಾವೇದ್ ಮುನೀಬಾ ಅಲಿ ನಜೀಹಾ ಅಲ್ವಿ (ವಿಕೆಟ್ಕೀಪರ್) ನಶ್ರಾ ಸಂಧು ಒಮೈಮಾ ಸೊಹೇಲ್ ಸಾಧಿಯಾ ಇಕ್ಬಾಲ್ ಸಿದ್ರಾ ಅಮಿನ್ ಸೈಯಿದಾ ಅರೂಬ್ ಶಹಾ ತಸ್ಮಿಯಾ ರುಬಾಬ್ ತುಬಾ ಹಸನ್.