ಎಮ್ ಬಿ ಬಿ ಎಸ್ ಆಯ್ಕೆಯಾದ ಇಂಚರ್ ಕೋಳಿ ಸಾಧನೆಗೆ ಸನ್ಮಾನ..
ಇಂಡಿ : ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಎಮ್ ಬಿ ಬಿ ಎಸ್ ಗೆ ಆಯ್ಕೆಯಾದ ಇಂಚರಾ ಹಾಗೂ ಅಂಚೆ ಇಲಾಖೆ ಅಸಿಸ್ಟೆಂಟ್ ಪೊಸ್ಟ ಮಾಸ್ಟರ್ ಹುದ್ದೆ ಆಯ್ಕೆಯಾದ ತಾಲೂಕಿನ ಅಂಜುಟಗಿ ಗ್ರಾಮದ ಆನಂದ ತಳವಾರ ಅವರಿಗೆ ತಳವಾರ ಸಮುದಾಯದ ಯುವಕರು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಪ್ರತಿಷ್ಠಿತ ಸಂಜೀವಿನಿ ಚಿಕ್ಕ ಮಕ್ಕಳ ಆಸ್ಪತ್ರೆ
ಕಾರ್ಯಾಲಯದಲ್ಲಿ ತಳವಾರ ಸಮಾಜದ ಯುವಕರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಎಸ್ ಎಸ್ ಪ್ಯಾರೆಮೆಡಿಕಲ್ ಕಾಲೇಜು ಅಧ್ಯಕ್ಷ ಹಾಗೂ ಅಡ್ವಕೆಟ್ ಸಂತೋಷ ಕೆಂಬೋಗಿ ಇಬ್ಬರು ಸಾಧಕರನ್ನು ಸನ್ಮಾನಿಸಿ ಗೌರವಿಸಿ ಮಾತಾನಾಡಿದರು.
ದೇಶಾದ್ಯಂತ ನಡೆಯುವ ನೀಟ್ ಪರೀಕ್ಷೆಯಲ್ಲಿ ಸುಮಾರು 21 ಲಕ್ಷಕ್ಕಿಂತಲೂ ಹೆಚ್ಚಿನ ವಿಧ್ಯಾರ್ಥಿಗಳು ಸ್ಪರ್ದೆ ಮಾಡಿರುತ್ತಾರೆ. ಆದರೆ ಅಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ಸಮುದಾಯದ ಹಾಗೂ ಡಾ.ಶ್ರೀಶೈಲ ಕೋಳಿ ಅವರ ಸುಪತ್ರಿ ಇಂಚರಾ ಪ್ರಶಂಸಿಯ ಫಲಿತಾಂಶ ತಂದಿದ್ದು ಹೆಮ್ಮ ವಿಷಯವಾಗಿದೆ. ಇನ್ನೂ ಮುಂದೆ ಸಮುದಾಯದಲ್ಲಿ ಹೆಚ್ಚಿನ ಯುವಕರು, ಯುವತಿಯರು ದೊಡ್ಡ ಮಟ್ಟದ ಸಾಧನೆ ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ತಜ್ಞ ಡಾ. ಶ್ರೀಶೈಲ ಕೋಳಿ ಅವರು ಮಾತಾನಾಡಿದ, ಈ ಸಮುದಾಯ ಶೈಕ್ಷಣಿಕ , ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯದಿಂದ ಅತೀ ಹಿಂದುಳಿದಿದ್ದು, ಇದನ್ನು ಸಮಾಜಿಕವಾಗಿ ಸಮಾಜವನ್ನು ಮುನ್ನುಡಿಗೆ ತರಲು ಯುವಕರ ಪಾತ್ರ ಅತೀ ಅವಶ್ಯಕ ಎಂದು ಹೇಳಿದರು.
ಈಗಾಗಲೇ ಸರಕಾರ ನೀಡಿರುವ ಮೀಸಲಾತಿ ಸರಿಯಾಗಿ ಸದುಪಯೋಗ ಮಾಡಿಕೊಂಡು ಶೈಕ್ಷಣಿಕವಾಗಿ ಬದಲಾವಣೆ ಕಂಡಾಗ ಮಾತ್ರ ನೀಡಿರುವ ಮೀಸಲಾತಿ ಮೌಲ್ಯ ಸಿಗುತ್ತದೆ. ಅದಲ್ಲದೇ ಸಮುದಾಯದಲ್ಲಿರುವ ಮೂಡ ನಂಬಿಕೆ ಮತ್ತು ಕೆಟ್ಟ ಹವ್ಯಾಸಗಳಿಂದ ಯುವಕರು ದೂರಾಗಬೇಕು ಎಂದು ಹೇಳಿದರು. ದಿನದ 24 ಘಂಟೆ ಸೇವೆ ಕೋಡಲು ಸಂಜೀವಿನಿ ಆಸ್ಪತ್ರೆ ಸದಾಸಿದ್ದ. ಹಾಗಾಗಿ ಯಾರಿಗೆ ತೊಂದರೆ ಯಾದರೂ ನಿಮಗೆ ಸ್ಪಂದಿಸುವ ಕಾರ್ಯ ತುರ್ತು ಮಾಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕ ಬೇವನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮು.ಗು ಬಂಗಾರಪ್ಪ ಜಮಾದಾರ, ಶಿಕ್ಷಕ ರಾಜು ಗಬ್ಬೂರ, ಆರ್ ಕೆ ವಾಲಿಕಾರ, ಯುವನಾಯಕ ಸೋಮು ಜಮಾದಾರ, ನಿಂಗಪ್ಪ ತಿಳಗೊಳ, ರವಿ ರಾಯಜಿ, ರೇವಣ್ಣ ಹತ್ತಳ್ಳಿ, ಸುರೇಶ್ ಡೊಂಗ್ರೊಜ್, ಅರವಿಂದ ದೊಡ್ಡಮನಿ, ಅಭಿಷೇಕ ಜಮಾದಾರ ಇನ್ನೂ ಅನೇಕ ಯುವಕರು ಉಪಸ್ಥಿತರಿದ್ದರು.