ದೇವರಹಿಪ್ಪರಗಿ : ಕೇಂದ್ರ ,ರಾಜ್ಯ ಸರಕಾರದ ಆದೇಶದಂತೆ ತಳವಾರ ಸಮುದಾಯದಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಆದರೆ ಇಲ್ಲಿಯವರೆಗೆ ತ್ರಾಂತ್ರಿಕ ತೊಂದರೆ ಹೇಳುತ್ತಾ, ಪೊಳ್ಳು ಭರವಸೆ ಕೊಡುತ್ತಾ ತಳವಾರ ಸಮುದಾಯಕ್ಕೆ ಮುಗಿಗೆ ತುಪ್ಪ ಹಚ್ಚುವ ಕೆಲಸ ಸರಕಾರ ಮಾಡುತ್ತಿದೆ ಎಂದು ತಳವಾರ ಸಮುದಾಯದ ಮುಖಂಡರು ಬೊಮ್ಮಾಯಿ ಸರಕಾರದ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿದರು.
ದೇವರ ಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮದಲ್ಲಿ ತಳವಾರ ಸಮುದಾಯದ ಮುಖಂಡರು, ರಾಜ್ಯ ಸರಕಾರ ವಿನೂತನ ಯೋಜನೆ, ಮನೆ ಮನೆಗೆ ಕಂದಾಯ ದಾಖಲೆಗಳ ವಿತರಣೆಯ ಕಾರ್ಯಕ್ರಮದ ವಿರುದ್ಧ ಕೊಟ್ಟ ದಾಖಲೆಗಳನ್ನು ಹರಿದು ಹಾಕಿ ಸರಕಾರದ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿದರು. ಇಲ್ಲಿಯವರೆಗೂ ಸರಕಾರದ ಈ ವಿನೂತನ ಯೋಜನೆ ವಿರುದ್ಧ ಯಾರೂ ಪ್ರತಿಭಟನೆ ಮಾಡಿರಲಿಲ್ಲ. ಆದರೆ ಎಲ್ಲಾ ವರ್ಗದವರು ಸ್ವೀಕಾರ ಮಾಡಿದ್ದರೆ, ತಳವಾರ ಸಮುದಾಯ ಮಾತ್ರ ಸರಕಾರದ ವಿನೂತನ ಯೋಜನೆಯ ವಿರುದ್ಧವಾಗಿ ನಿಂತುಕೊಂಡಿದೆ. ಬಹುತೇಕವಾಗಿ ವಿಜಯಪುರ ಜಿಲ್ಲೆಯ ಅನೇಕ ಕಡೆ ಈ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಅದರಂತೆ ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮದಲ್ಲಿ ಮುಖಂಡರು ಕೂಡಾ ಕೂಡಲೇ ಎಸ್ಟಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆಗೆ ಸಾಕ್ಷಿಯಾದರು.
ಇನ್ನೂ ಈ ಸಮುದಾಯದ ಮುಖಂಡ ವಸಂತ ಬಾಗೇವಾಡಿ ಮಾತಾನಾಡಿದ ಅವರು, ಕಳೆದ ಸಿಂದಗಿ ಉಪಚುನಾವಣೆಗೆ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೇರಿದಂತೆ ಅನೇಕ ಸರಕಾರದ ಜನಪ್ರತಿನಿಧಿಗಳು ಮತ್ತು ಬಿಜೆಪಿ ಮುಖಂಡರು ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿದ್ದರು. ಆದರೆ ಬೊಮ್ಮಾಯಿಯವರು ಪ್ರಮಾಣ ಪತ್ರ ಕೊಡಿಸುವ ಭರವಸೆ ಇಂದು ಹುಸಿಯಾಗಿದೆ ಎಂದು ಹತಾಶೆ ಭಾವನೆಯಿಂದ ನೋವು ವ್ಯಕ್ತ ಪಡಿಸಿದರು. ಕೂಡಲೇ ಸರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡಬೇಕು. ಇಲ್ಲವಾದಲ್ಲಿ ಇನ್ನೂ ಕ್ರಾಂತಿಕಾರಿ ಪ್ರತಿಭಟನೆ ಜೊತೆಗೆ ವಿಧಾನ ಸಭೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಟ್ಟಪ್ಪ ಕರ್ನಾಳ, ರಮೇಶ ವಾಲಿಕಾರ, ಪರಸಪ್ಪ ಕರ್ನಾಳ, ತುಳಜಪ್ಪ ಬಮ್ಮನಹಳ್ಳಿ, ಆನಂದ ಕರ್ನಾಳ, ರಾಮಣ್ಣ ಕರ್ನಾಳ, ಸಂಜೀವ ಬಾಗೇವಾಡಿ, ಅವಣ್ಣ ಕರ್ನಾಳ, ಇಟ್ಟಪ್ಪ ಕರ್ನಾಳ ಮೌನೇಶ ವಾಲಿಕಾರ ಮತ್ತು ಅನೇಕ ಯುವಕರು ಉಪಸ್ಥಿತರು.