ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು ಸಾಧ್ಯ..!
ಇಂಡಿ : ವಿವೇಕಾನಂದರ ಸಂದೇಶ ಯಶಸ್ಸು ಹಾಗೂ ಗುರಿಯನ್ನು ಸಾಧಿಸಲು ಸ್ವಾಮಿ ವಿವೇಕಾನಂದರ ಬೋಧನೆಗಳು, ಯುವಕರಿಗೆ ಮಾರ್ಗದರ್ಶನ ಮತ್ತು ಜೀವನದಲ್ಲಿ ಅವರ ತತ್ವಗಳು ಅಳವಡಿಸಿಕೊಳ್ಳುವುದರ ಮೂಲಕ ಎಂತಹುದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸನ್ನು ಪಡೆಯಲು. ಸಾಧ್ಯ ಎಂದು ರೇಖಾ ಎನ್ ರವರು ಮಕ್ಕಳಿಕೆ ಕಿವಿ ಮಾತುಗಳನ್ನು ಹೇಳಿದರು.
ನಗರದ ಎಕ್ಸಲೆಂಟ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರಿಗೆ ಬೆಳಕು, ಯೋಗಿ, ಭಾರತದ ದೇಶಭಕ್ತ ಸಂತ, ಆಧುನಿಕ ಭಾರತದ ಪ್ರವಾದಿ. ಹೀಗೆ ನಾವು ಅವರನ್ನು ಹಲವಾರು ಹೆಸರುಗಳಿಂದ ಸ್ವಾಮಿ ವಿವೇಕಾನಂದರನ್ನು ಕರೆಯುತ್ತೇವೆ. ವಾಸ್ತವವಾಗಿ, ಅವರ ಬೋಧನೆಗಳು, , ನುಡಿಗಳು ಯಾವಾಗಲೂ ನಮ್ಮ ದೇಶದ ಯುವಕರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ನಮ್ಮ ಬೌದ್ಧಿಕ ಉನ್ನತಿ, ಆಧ್ಯಾತ್ಮಿಕ ಮತ್ತು ಭೌತಿಕ ಸಮೃದ್ಧಿಯಲ್ಲಿ ಯುವಕರು ವಹಿಸಬೇಕಾದ ಮುಖ್ಯ ಪಾತ್ರದ ಬಗ್ಗೆ ಸ್ವಾಮಿ ವಿವೇಕಾನಂದರು ಧ್ವನಿ ಎತ್ತುವ ಮೂಲಕ ಯುವಕರನ್ನು ಎಚ್ಚರಗೊಳಿಸಿದರು ಎಂದು ಪಲ್ಲವಿ ಒಂಟಕುದರಿರವರು ಮಾತನಾಡಿದರು .
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶ್ರೀಶೈಲ ಹೂಗಾರ, ಶಿಕ್ಷಕಿ ಲಕ್ಷ್ಮೀ ವಾರಿಕ್ ಮಾಹಾದೇವಿ ಕೆಂಬೋಗಿ ವೈಶಾಲಿ ಗಜಪ್ಪನವರ, ರಾಣಿ ಬಿರಾದಾರ, ಲಕ್ಷ್ಮೀ ಪತ್ತಾರ, ನೇತ್ರಾ ಬಡಿಗೇರ, ರೋಹಿಣಿ ಬಡಿಗೇರ, ಮಿನಾಕ್ಷಿ ರಾಠೋಡ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಆಸೀಪ ಕಲಾವಂತ ಸ್ವಾಗತಿಸಿ ನಿರೂಪಿಸಿದರು. ಇನ್ನೂ ಶಿಕ್ಷಕಿ ರಾಣಿ ಪತ್ತಾರ ವಂದಿಸಿದರು.