ಅಗರಖೇಡ ಗ್ರಾಮದಲ್ಲಿ ನೀರಿನ ತೊಂದರೆ.
ಇಂಡಿ : ತಾಲೂಕಿನ ಅಗರಖೇಡ ಗ್ರಾಮದ ವಾರ್ಡ ನಂ ೭ ರಲ್ಲಿ ನೀರಿನ ತೊಂದರೆ ಇದೆ ಎಂದು ಅಶೋಕ ಖಂಡೆಕರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಾರ್ಡ ಅತೀ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿ ಹಿಂದುಳಿದ ಜನಾಂಗ ಹೆಚ್ಚಾಗಿ ವಾಸ ಮಾಡುತ್ತಾರೆ. ಈ ವಾರ್ಡಗೆ ಲೋಣಿ ಕೆರೆಯಿಂದ ನೀರು ಬರುತ್ತಿದೆ. ಕಳೆದ ೬ ದಿನಗಳಿಂದ ಈ ವಾರ್ಡಗೆ ನೀರು ಬಂದಿರುವುದಿಲ್ಲ. ಮತ್ತೆ ಈ ವಾರ್ಡಲ್ಲಿ ಬೊರವೆಲ್ ಸೌಲಭ್ಯ ಇರುವುದಿಲ್ಲ. ಈ ಕುರಿತು ಗ್ರಾ.ಪಂ ನೀರು ನಿರ್ವಹಣಾ ಅಧಿಕಾರಿಗಳಿಗೆ, ಕಾರ್ಯದರ್ಶಿ ಅವರಿಗೆ ಮತ್ತು ತಾ.ಪಂ ಅಧಿಕಾರಿ ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಖಂಡೆಕರ ತಿಳಿಸಿದ್ದಾರೆ.


















