ಕೃಷ್ಣಾ ಕಾಲುವೆಯಿಂದ ಭೀಮೆಗೆ ನೀರು
ಇಂಡಿ : ಕೃಷ್ಣಾ ಮುಖ್ಯ ಕಾಲುವೆಯಿಂದ ಭೀಮೆಗೆ ನೀರು
ಹರಿಯ ಬಿಡಲಾಗಿದೆ ಎಂದು ಕೆ.ಬಿ.ಜೆ.ಎನ್ ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ
ತಿಳಿದ್ದಾರೆ. ಕೃಷ್ಣಾ ಕಾಲುವೆಯಿಂದ ತೆಗ್ಗೆಳ್ಳಿ ಹಳ್ಳ, ಮಾರ್ಸನಳ್ಳಿ, ಅರ್ಜುಣಗಿ, ಹಂಚನಾಳ, ಮಿರಗಿ
ಹಳ್ಳಗಳಿಗೆ ನೀರು ಹರಿಯುತ್ತಿದೆ.
ನಂತರ ಮಿರಗಿ ಹಳ್ಳದಿಂದ ಭೀಮಾ ನದಿಗೆ ಸೇರುತ್ತದೆ. ಈ ನೀರು ಜನ ಜಾನುವಾರುಗಳಿಗೆ ಗ್ರಾಮದ ಜನರಿಗೆ, ಅಡವಿ ವಸ್ತಿ ಜನರಿಗೆ ಕುಡಿಯಲು ಉಪಯೋಗವಾಗುತ್ತದೆ ಎಂದು ಗಡಬಳ್ಳಿ ತಿಳಿಸಿದ್ದಾರೆ.
ಸಹಾಯಕ ಅಭಿಯಂತರ ಸುಧಾಕರ ಶಿರಗಣ್ಣನವರ, ಭೀರಪ್ಪ ಪೂಜಾರಿ,ಕಿರಿಯ ಅಭಿಯಂತರ ಸಾಧಿಕ ಹೊನ್ನಟಗಿ ಮತ್ತಿತರಿದ್ದರು.
ಇಂಡಿ ತಾಲೂಕಿನ ತೆಗ್ಗೆಳ್ಳಿ ಹತ್ತಿರ ಹಳ್ಳದಲ್ಲಿ
ಹರಿಯುತ್ತಿರುವ ಕಾಲುವೆ ನೀರು .
ಯುಗ ಯುಗ ಕಳೆದರೂ ಮರಳಿ ಬರುವ ಯುಗಾದಿ ಭೂಮಿಗೆಲ್ಲ ಮುದ ನೀಡುವ, ಒಣಗಿದ ಮರಗಿಡಗಳಿಗೆಲ್ಲ ಹೊಸ ಚಿಗುರು,ಹೊಸ ಹುಮ್ಮಸ್ಸು ನೀಡುವ ನಿಸರ್ಗ ನಮ್ಮೆಲ್ಲರ ಬಾಳಿನಲ್ಲಿಯ ಕಹಿಯನ್ನೆಲ್ಲ ಕಳೆದು ಸಿಹಿಯನ್ನು ನೀಡಲಿ.
ಸುಖ,ಸಂತೋಷ, ಆಸೆಗಳೆಲ್ಲ ಚಿಗುರಿ ಹೆಮ್ಮರವಾಗಲಿ.
ಮರಳಿ ಬಂದಿದೆ ಯುಗಾದಿ ತಂದಿದೆ ಹೊಸ ವರುಷದ ಆದಿ ತೋರಲಿ ಹೊಸ ವರುಷಕ್ಕೆ ಹಾದಿ ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ ಯುಗಾದಿ.
ಯುಗಾದಿ ಹಬ್ಬದ ಶುಭಾಶಯಗಳು
Editor : ಶಂಕರಲಿಂಗ ಜಮಾದಾರ, ವೈಸ್ ಆಫ್ ಜನತಾ
MoB :9972400321/8618981392
🌹🌹💐🙏🏻🙏🏻💐🌹🌹