ಕುಡಿಯಲು ಕಾಲುವೆಗಳಿಗೆ ನೀರು, ಆದರೆ 144 ಕಲಂ ಜಾರಿ..!
ವಿಜಯಪುರ : ಜನ ಜಾನುವಾರುಗಳಿಗೆ ಕುಡಿಯುವ ನೀರು ಹರಿಸುವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ವಿತರಣಾ ಶಾಖಾ ಕಾಲುವೆಯ ದಡದ ಎಡ-ಬಲ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಕಲಂ 144 ಜಾರಿ ಮಾಡಿ ಜಿಲ್ಲಾ ಅಧಿಕಾರಿ ಟಿ.ಭೂಬಾಲನ್ ಆದೇಶಿಸಿದ್ದಾರೆ.
ನಾರಾಯಣಪೂರ ಜಲಾಶಯದಿಂದ ಬಿಡುಗಡೆ ಮಾಡಲಾದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಉಪಯೋಗಿಸುವಂತೆ ಇಂಡಿ ಏತ ನೀರಾವರಿ ಕಾಲುವೆ (ಗುತ್ತಿ ಬಸವಣ್ಣ ) ಕಿ.ಮೀ 12 ರಿಂದ 50 ರವರೆಗೆ ಹಾಗೂ ಇಂಡಿ ಶಾಖಾ ಕಾಲುವೆಗೆ ಗ್ರಾಮೀಣ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಾಗಿ ಕಾಲುವೆ ನಂ 20 ರಿಂದ ರಿಂದ 172 ರ ವಿತರಣಾ ಕಾಲುವೆಯ ಕೊನೆಯ ಭಾಗದವರೆಗೆ ತಲುಪಿಸುವಗೋಸ್ಕರ, ನೀರು ಹರಿಸುವ ಸಮಯದಲ್ಲಿ ಗೇಟಗಳಗೆ ಸಿಕ್ಕ ಮಾಡದಂತೆ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಕಾಲುವೆ ಎಡ-ಬಲ 100 ಅಡಿ ವ್ಯಾಪ್ತಿಯಲ್ಲಿ ದಿನಾಂಕ : 25-07-2023 ರ ರಿಂದ ದಿನಾಂಕ : 09-08-2023 ರವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶಿಸಲಾಗಿದೆ,
-:ಷರತ್ತುಗಳು :-
1. ಇಂಡಿ ಏತ ನೀರಾವರಿ ಯೋಜನೆ ಕಾಲುವೆಯ ಕೊನೆಯ ಭಾಗದವರೆಗೆ ಕಾಲುವೆ ವ್ಯಾಪ್ತಿಯ ದಡದ 100 ಅಡಿ ಸುತ್ತಮುತ್ತಲನ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಒಡಾಡುವದನ್ನು ನಿಷೇಧಿಸಿದೆ. .
2. ಕಾಲುವೆಯಿಂದ ಅಕ್ರಮ ಪಂಪಸೆಟ್‌ಗಳನ್ನು ಇಡಕೂಡದು
3. ಹೆಸ್ಕಾಂ ಇಲಾಖೆಯಿಂದ ಸದರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು. 4. ಸದರಿ ಕಾಲುವೆಯ ದಡದ ಸುತ್ತಮುತ್ತಲನ 100 ಅಡಿ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.