VOJ ನ್ಯೂಸ್ ಡೆಸ್ಕ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿ ಶೀಟರ್ ಒಬ್ಬ ರೈಲಿನಡಿಗೆ ಸಿಲುಕಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಬಸವನಪುರದಲ್ಲಿ ನಡೆದಿದೆ. ಕಾರುಗಳಲ್ಲಿ ರೌಡಿ ತಂಡವೊಂದು ಪ್ರಯಾಣ ಬೆಳಸಿದ್ದರು. ಪೊಲೀಸರು ಅವರನ್ನು ತಡೆದು ವಿಚಾರಣೆ ಮಾಡುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ರೌಡಿ ಶೀಟರ್ ದಿಲೀಪ್ ಎನ್ನುವ ವ್ಯಕ್ತಿ ಪ್ರಯತ್ನಿಸಿದ್ದಾನೆ. ಜೋರಾಗಿ ವೇಗವಾಗಿ ಓಡಿಲು ಆರಂಭಿಸಿದ ದಿಲೀಪ ರೈಲು ಬರುತ್ತಿರುವುದನ್ನು ಗಮನಿಸಿಲ್ಲ. ದಿಲೀಪ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾನೆ. ಇನ್ನು ದಿಲೀಪ್ ಜತೆಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.