ವಕ್ಫ್ ಆಸ್ತಿ ದಂಗಲ್..! ಕೊಡಿಹಳ್ಳಿ ಚಂದ್ರಶೇಖರ ವಿಜಯಪುರ ಜಿಲ್ಲೆಗೆ ಮಂಗಳವಾರ ಆಗಮನ
ಇಂಡಿ : ವಕ್ಫ್ ಬೊರ್ಡನಿಂದ ರೈತರ ಭೂಮಿ ಕಬಳಿಕೆಗೆ ಸಂಚು ಎಂಬ ಗುಮ್ಮ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ವಿಜಯಪುರ ಜಿಲ್ಲೆಗೆ ಬೇಟಿ ನೀಡಲಿದ್ದಾರೆಂದು ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ರೈತರು ತಲೆತಲಾಂತರದಿಂದ ಉಳುಮೆ ಮಾಡುತ್ತಿದ್ದ ಕೃಷಿ ಭೂಮಿ ವಕ್ಫ್ ಆಸ್ತಿ ಎಂಬುದು ಅನ್ನದಾತರಲ್ಲಿ ಭಯ ಆತಂಕ ಮೂಡಿದೆ. ಹಾಗಾಗಿ ಇಂಡಿ ತಾಲ್ಲೂಕಿನ ತೆನಿಹಳ್ಳಿ ಜೊತೆಗೆ ಇನ್ನಿತರ ಹಳ್ಳಿಗೆ ಬೇಟಿ ಕೊಡುವ ಯೋಜನೆ ರೂಪಿಸಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ನೇರವಾಗಿ ರೈತರನ್ನು ಬೇಟಿಯಾಗಿ ನೊಂದವರಿಗೆ ಧರ್ಯ ತುಂಬುವ ಹಾಗೂ ನ್ಯಾಯ ಕೊಡಿಸುವ ವಿಚಾರವಾಗಿ ಆಗಮಿಸುತ್ತಿದ್ದಾರೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು
ಪಾಲ್ಗೊಳ್ಳಲು ಕರೆ ನೀಡಿದ್ದಾರೆ.