ಲಿಂಗಸುಗೂರು : ಚರಂಡಿ ಜಗಳದಿಂದ ಮೃತಪಟ್ಟಿದ್ದ ವೃದ್ಧೆ ಪ್ರಕರಣ ರಾಜಕೀಯ ದ್ವೇಶಕ್ಕೆ ಕಾರಣವಾಗಿದೆ ಎಂಬ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆರೋಪಿಯ ಪರ ಮಾನಪ್ಪ ವಜ್ಜಲ್ ನಿಂತಿದ್ದು ಪ್ರಕರಣ ದಾಖಲಿಸುತ್ತಿಲ್ಲ ಈ ಕೂಡಲೆ ಕ್ರಮಕ್ಕೆ ಒತ್ತಾಯಿಸಿ ಗೃಹ ಮಂತ್ರಿಗಳಿಗೆ ಮನವಿ ಮಾಡಿ ಅಸಮದಾನ ವ್ಯಕ್ಯಪಡಿಸಲಾಗುತ್ತಿದೆ.
ಹೌದು ಪ್ರಗತಿಪರ ಮುಖಂಡ ಆರ ಮಾನಸಯ್ಯ ಕೊಲೆ ಪ್ರಕರಣಕ್ಕೆ ಫೇಸ್ ಬುಕ್ ನಲ್ಲಿ ಅಸಮಧಾನಕ್ಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಲಿಂಗಸಗೂರು ತಾಲೂಕ ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆ ವ್ಯಾಪ್ತಿಯ ನಿಲೋಗಲ್ ಗ್ರಾಮದ ಉಪ್ಪಾರ ಸಮಾಜದ, ಸೈನಿಕ ಅಮರೇಶನ ಮನೆಯ ಮೇಲೆ ಆ ಗ್ರಾಮದ ಬಿಜೆಪಿ ಮುಖಂಡ ಶರಣಪ್ಪಗೌಡ ಎಂಬುವವರು ದೊಡ್ಡ ಗುಂಪು ಕಟ್ಟಿ ದಾಳಿ ಮಾಡಿದ್ದಾರೆ.
ದಾಳಿಗೆ ವೇಳೆ ಸೈನಿಕ ಅಮರೇಶನ ತಾಯಿ ಈರಮ್ಮ ಉಪ್ಪಾರ ಎಂಬುವವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಆದರೇ ಪೊಲೀಸ್ ಠಾಣೆಯಲ್ಲಿ 302 ಅಡಿ ದೂರು ದಾಖಲಿಸಿ ಕೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ. ಮಾಜಿ ಶಾಸಕ ಮಾನಪ್ಪ ವಜ್ಜಲ ಕೊಲೆಗಾರರ ಬೆನ್ನಿಗೆ ನಿಂತಿದ್ದಾರೆ. ತಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಸಾಮೂಹಿಕ ದಾಳಿಯ ಅಪರಾಧದ, ಜತೆ 302ರ ಅಡಿ ದೂರು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಕೂಡಲೆ ಬಂಧಿಸುವ ಕ್ರಮ ಕೈಗೊಳ್ಳಬೇಕು ಎಂದು ಆರ್.ಮಾನಸಯ್ಯ ತಮ್ಮ ಫೆಸ್ ಬುಕ್ ನಲ್ಲಿ ಒತ್ತಾಯಿಸಿ ಅಸಮಧಾನ ವ್ಯಕ್ತಪಡಿಸಿದ್ದಾರೆ.