ವೃಕ್ಷೊಥಾನ್ ಹೆರಿಟೇಜ್ ರನ್- 2024, ಓಟದಲ್ಲಿ ಪಾಲ್ಗೋಳ್ಳುವಂತೆ ಆಹ್ವಾನ
ವಿಜಯಪುರ, ನ. 23: ಯುನಸಬಲೀಕರಣ ಮತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್ ಅವರನ್ನು ಭೇಟಿ ಮಾಡಿದ ವೃಕ್ಷೊಥಾನ್ ಹೆರಿಟೇಜ್ ರನ್- 2024 ಕೋರ್ ಕಮಿಟಿ ಸದಸ್ಯರು ಡಿಸೆಂಬರ್ 22 ರಂದು ನಡೆಯಲಿರುವ ಓಟದಲ್ಲಿ ಪಾಲ್ಗೋಳ್ಳುವಂತೆ ಆಹ್ವಾನ ನೀಡಿದರು.
ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರ ನೇತೃತ್ವದಲ್ಲಿ ಶುಕ್ರವಾರ ಮುಸ್ಸಂಜೆ ಎಸ್ಪಿ ಕಚೇರಿಯಲ್ಲಿ ಚೇತನ್ ಆರ್. ಅವರನ್ನು ಭೇಟಿ ಮಾಡಿದ ಸದಸ್ಯರು ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಈವರೆಗೆ ನಡೆದ ಹೆರಿಟೇಜ್ ರನ್ ಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಪ್ರತಿವರ್ಷ ಈ ಓಟದಲ್ಲಿ ಪಾಲ್ಗೋಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಿಂದಲೂ ಮ್ಯಾರಾಥಾನ್ ಓಟಗಾರರು ಹೆಸರು ನೋಂದಾಯಿಸುತ್ತಿದ್ದಾರೆ. ದೇಶದ ಹೆಸರಾಂತ ಮ್ಯಾರಾಥಾನ್ ಗಳ ಪಟ್ಟಿಯಲ್ಲಿ ವಿಜಯಪುರದಲ್ಲಿ ನಡೆಯುವ ಹೆರಿಟೇಜ್ ರನ್ ಒಂದಾಗಿದೆ ಎಂದು ಹೇಳಿದರು. ಕಳೆದ ವರ್ಷ 10 ಸಾವಿರ ಜನ ಈ ಓಟದಲ್ಲಿ ಪಾಲ್ಗೋಂಡಿದ್ದರು. ಈ ಬಾರಿ 15 ರಿಂದ 20 ಸಾವಿರ ಜನರು ಪಾಲ್ಗೋಳ್ಳುವ ನಿರೀಕ್ಷೆಯಿದೆ. ವಿಜಯಪುರದಲ್ಲಿರುವ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಆಯೋಜಿಸಲಾಗಿರುವ ಈ ಓಟದಲ್ಲಿ ತಾವೂ ಪಾಲ್ಗೋಳ್ಳುವಂತೆ ಚೇತನ ಆರ್. ಅವರಿಗೆ ಈ ವೇಳೆ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಹೆರಿಟೇಜ್ ರನ್ ಕೋರ್ ಕಮಿಟಿ ಸದಸ್ಯರಾದ ಶಿವನಗೌಡ ಪಾಟೀಲ, ಸಂಕೇತ ಬಗಲಿ, ಮಹೇಶ ವಿ. ಶಟಗಾರ, ಸೋಮಶೇಖರ ಸ್ವಾಮಿ, ಡಾ. ಭೀಮನಗೌಡ ಬಿರಾದಾರ, ಸಮೀರ ಬಳಗಾರ, ಅಮಿತ ಬಿರಾದಾರ, ವೀಣಾ ದೇಶಪಾಂಡೆ, ನವೀದ ನಾಗಠಾಣ ಉಪಸ್ಥಿತರಿದ್ದರು.
ವೃಕ್ಷೊಥಾನ್ ಗೆ ಆಹ್ವಾನ:
ವಿಜಯಪುರ ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೊಥಾನ್ ಹೆರಿಟೇಜ್ ರನ್-2024ರಲ್ಲಿ ಪಾಲ್ಗೊಳ್ಳುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ ಆರ್. ಅವರಿಗೆ ಡಾ. ಮಹಾಂತೇಶ ಬಿರಾದಾರ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಕೋರ್ ಕಮಿಟಿ ಸದಸ್ಯರಾದ ಸಂಕೇತ ಬಗಲಿ, ಶಿವನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.