ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನದ ಜಾಗೃತಿ
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನದ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇಂದು ಬುಧವಾರ ಡೀಮ್ಡ್ ವಿವಿಯ ಕಾನೂನು ಶಾಲೆಯಲ್ಲಿ ನಡೆಯಿತು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಶಿವಾನಂದ ಜಮಾದಾರ ಅವರು ಮತದಾನದ ಮಹತ್ವ, ದೇಶದ ಭವಿಷ್ಯ ರೂಪಿಸುವಲ್ಲಿ ಯುವ ಸಮುದಾಯದ ಪಾತ್ರ ಕುರಿತು ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಡಾ. ಸಂದೀಪ ಯಂಕಂಚಿ, ಚುನಾವಣೆ ಸಾಕ್ಷರತೆ ಕ್ಲಬ್ ಸ್ಥಾಪನೆಯ ಉದ್ದೇಶ ಮತ್ತು ಶಾಲೆ ಹಾಗೂ ಕಾಲೇಜುಗಳಲ್ಲಿ ಸಾಕ್ಷರತೆ ಕ್ಲಬ್ ಸ್ಥಾಪನೆಯ ಮಹತ್ವ ವಿವರಿಸಿದರು.
ಈ ಸಂದರ್ಭದಲ್ಲಿ ಇ.ಎಲ್.ಸಿ ಸಂಚಾಲಕ ಗಿರೀಶ ಬಿಸನಾಳ, ಅಲೈಡ್ ಹೆಲ್ತ್ ಸಾಯಿನ್ಸ್, ಸ್ಕೂಲ್ ಆಫ್ ಫಿಜಿಯೋಥೆರಪಿ, ಸ್ಕೂಲ್ ಆಫ್ ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ. ಗುರುಶಾಂತಪ್ಪ ಎಸ್. ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಾವಣ್ಯ ಕುಲಕರ್ಣಿ ನಿರೂಪಿಸಿದರು. ಯೋಗಿಣಿ ಅಥ್ರೆ ವಂದಿಸಿದರು.
BLDEDU ELC : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನದ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡಾ. ಶಿವಾನಂದ ಜಮಾದಾರ ಮಾತನಾಡಿದರು.




















