ಕರ್ನಾಟಕ ಸರಕಾರಿ ನೌಕರ ಸಂಘದ ನೌಕರರ ಮತದಾರ ಪಟ್ಟಿ ಸಂಪೂರ್ಣ ಅವೈಜ್ಞಾನಿಕ : ವಾಯ್ ಟಿ ಪಾಟೀಲ
ಇಂಡಿ : ಕರ್ನಾಟಕ ಸರಕಾರಿ ನೌಕರ ಸಂಘದ ನೌಕರರ ಮತದಾರ ಪಟ್ಟಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅದನ್ನು ತೀವ್ರವಾಗಿ ಖಂಡಿಸುತ್ತೆವೆ. ಅದಲ್ಲದೇ ನಿವೃತ್ತ, ಮೈತ, ವರ್ಗಾವಣೆ, ಸತತ ಗೈರು ಹಾಜರಿದ್ದ ಶಿಕ್ಷಕ ನೌಕರರನ್ನು ಮತದಾರ ಪಟ್ಟಿಯಿಂದ ಕೈ ಬಿಡಬೇಕಾಗಿತ್ತು. ಆದರೆ ಮತದಾರ ಪಟ್ಟಿಯಿಂದ ಕೈ ಬಿಡದೆ ಚುನಾವಣೆ ನಡೆಸುತ್ತಿದ್ದು ಅತ್ಯಂತ ನೋವಿನ ವಿಷಯ. ಈ ಕೂಡಲೇ ಮತದಾರ ಪಟ್ಟಿ ಸರಪಡಿಸಿ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಇಂಡಿ ತಾಲ್ಲೂಕು ಘಟಕದಿಂದ ಆಗ್ರಹಿಸುತ್ತೆವೆ ಎಂದು ಅಧ್ಯಕ್ಷ ವಾಯ್ ಟಿ ಪಾಟೀಲ ಹೇಳಿದರು.
ಬುಧವಾರ ಪಟ್ಟಣದ ಗುರುಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 2024-29 ರ ವರೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಕಾರಿ ಸಮಿತಿ ಚುನಾವಣೆ ಮತದಾರ ಪಟ್ಟಿ ಉದ್ದೇಶಪೂರ್ವಕವಾಗಿ ಅರ್ಹತಾ ಮತದಾರರನ್ನು ಹೊರತು ಪಡಿಸಿ, ಅವರಿಗೆ ಅನುಕೂಲವಾಗುವಂತೆ ಮತದಾರ ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ. ಈ ಸದ್ಯ ಚುನಾವಣೆ ನಾಮ ಪತ್ರ ಸಲ್ಲಿಕೆ ಪ್ರಾರಂಭವಾದರೂ ಮತದಾರ ಪಟ್ಟಿ ಪ್ರಕಟಣೆ ಮಾಡಿರುವುದಿಲ್ಲ. ಇನ್ನೂ ಶಿಕ್ಷಣ ಇಲಾಖೆಗೆ ಘೋಷಣೆಯಾದಂತಹ ಅನುಭಂದ 3 ಪ್ರಕಾರ ಶಿಕ್ಷಣ ಇಲಾಖೆಗೆ ಒಂದೇ ಕ್ಷೇತ್ರ ಇರಬೇಕಾದ ವ್ಯವಸ್ಥೆಯನ್ನು ಇಬ್ಬಾಗ ಮಾಡಿ, (6)1 ಮತ್ತು (6)2 ಹೀಗೆ ಮತದಾರರನ್ನು ವಿಂಗಡಿಸಿ (6)1 ರಲ್ಲಿ 500 ಶಿಕ್ಷಕ ಮತದಾರರಿದ್ದು, 3 ಜನರಿಗೆ ಉಮೇದುವಾರಿಕೆ ಅವಕಾಶ ಮಾಡಿಕೋಡಲಾಗಿದೆ. (6)2 ರಲ್ಲಿ 563 ಶಿಕ್ಷಕ ಮತದಾರರಿದ್ದು 2 ಜನ ಉಮೇದುವಾರಿಕೆಗೆ ಅವಕಾಶ ಮಾಡಿಕೊಡಲಾಗಿದ್ದು ಸಮಸ್ಯಾತ್ಮಕ ವಿಚಾರವಾಗಿದೆ. ಅದಲ್ಲದೇ ಯಾವ ಮತದಾರ ಆಡಳಿತ ಮಂಡಳಿಗೆ ಜೈ ಎನ್ನುತ್ತಾರೆವೋ (6)1 ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಬೇಡವಾದ ಮತದಾರರನ್ನು (6)2 ಪಟ್ಟಿಯಲ್ಲಿ ಸೇರ್ಪಡಿಸಿ ಹಾಗೂ ಬೇರೆ ಬೇರೆ ಸ್ಥಳಗಳಿಂದ ಬೇರೆ ಬೇರೆ ಸ್ಥಳಗಳಿಗೆ ಸೇರ್ಪಡಿಸಿದ್ದು ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮಗೆ ಬೇಕಾದ ಶಿಕ್ಷಕರನ್ನು ಭಾಗ-1ರಲ್ಲಿ ಬೇಡವಾದವರನ್ನು ಭಾಗ-2ರಲ್ಲಿ ಸೇರಿಸಿ ಲೋಪವೆಸಗಿದ್ದು ಕಂಡು ಬರುತ್ತದೆ. ಈ ಕೂಡಲೇ ಎಲ್ಲಾ ನ್ಯೂನತೆಗಳು ಸರಿಪಡಿಸಿ ಚುನಾವಣೆ ನಡೆಸಲು ಆಗ್ರಹಿಸುತ್ತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಮ್ ಎಮ್ ವಾಲಿಕಾರ, ಎಸ್ ವಿ ಹರಳಯ್ಯ, ಎ ಎಮ್ ವಾಲಿಕಾರ, ಅಲ್ತಾಪ್ ಬೊರಾಮಣಿ, ಎಮ್ ಡಿ ಕಂಠಿಕರ, ಆನಂದ ವಾಲಿಕಾರ, ಪಿ ಜಿ ಕಲ್ಮನಿ,
ಬಿ ಎಂ ವಠಾರ, ಜಿ ಆರ್ ಕಟಕದೊಂಡು, ಎ ಸಿ ಬಡಿಗೇರ, ರವೀಂದ್ರ ಬಿರಾದಾರ,ಸುರೇಶ ಚವ್ಹಾಣ,ಟಿ.ಕೆ ಪೂಜಾರಿ, ಬಂಗಾರಪ್ಪ ಜಮಾದಾರ D K ಗೊಬ್ಬರ, ಜಗದೀಶ್ ಚವಡ್ಯಾಳ,
ಎಸ್ ಬಿ ಸರಸಂಬಿ,ಎಂ ಬಿ ಟೆಂಗಳೆ ಇನ್ನೂ ಅನೇಕರು ಉಪಸ್ಥಿತರಿದ್ದರು.