Voice Of JANATA DesK :Sports News : ICC UNDER 19 WORLD CUP 2024
ದಕ್ಷಿಣ ಆಫ್ರಿಕಾದ ಬೆನೊನಿಯಲ್ಲಿರುವ ಸಹಾರಾ ಪಾರ್ಕ್ ವಿಲ್ಲೊಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2024 ರ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾನುವಾರ, ಫೆಬ್ರವರಿ 11 ರಂದು ಈ ಪಂದ್ಯ ನಡೆಯಲಿದೆ.
ಭಾರತವು ತಮ್ಮ ದಾಖಲೆಯ ಆರನೇ ಅಂಡರ್ 19 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. 2000, 2008, 2012, 2018 ಮತ್ತು 2022ರಲ್ಲಿ ಜಯಗಳಿಸುವ ಮೂಲಕ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಅಜೇಯವಾಗಿ ಫೈನಲ್‌ಗೆ ಬಂದಿವೆ. ಆದಾಗ್ಯೂ, ಸೂಪರ್-6 ಹಂತದಲ್ಲಿ ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಪಂದ್ಯ ಫಲಿತಾಂಶವಿಲ್ಲದೆ ಕೊನೆಯಾಗಿತ್ತು. ಆದರೆ, ಭಾರತ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.
ಭಾರತ vs ಆಸ್ಟ್ರೇಲಿಯಾ ಫೈನಲ್ಫೈನಲ್ ಪಂದ್ಯವು ಫೆಬ್ರವರಿ 11 ರಂದು ಭಾನುವಾರ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಮೂರನೇ ಬಾರಿಗೆ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಹಿಂದಿನ ಎರಡೂ ಮುಖಾಮುಖಿಗಳಲ್ಲಿ ಭಾರತ ಜಯ ಸಾಧಿಸಿತ್ತು. ಭಾರತ ತಂಡ 2012 ಮತ್ತು 2018ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ.
ಪಂದ್ಯದ ಸಮಯ, ನೇರಪ್ರಸಾರ
ಅಂಡರ್19 ವಿಶ್ವಕಪ್ ಫೈನಲ್ ಭಾನುವಾರ, ಫೆಬ್ರವರಿ 11 ರಂದು ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಣೆ ಮಾಡಬಹುದು. ಮೊಬೈಲ್‌ನಲ್ಲಿ ಪಂದ್ಯ ನೋಡುವವರು ಹಾಟ್‌ಸ್ಟಾರ್ ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.