ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ..
ಇಂಡಿ : ಸೆ – 17 ರಂದು ನಡೆಯುವ ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ತಹಶಿಲ್ದಾರ ಬಿ.ಎಸ್. ಕಡಕಭಾವಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಗುರುವಾರ ಜರುಗಿತ್ತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡ ರಮೇಶ್ ಪೊದ್ದಾರ ಹಾಗೂ ಸುಶೀಲಕುಮಾರ ಲಾಳಸಂಗಿ ಮಾತಾನಾಡಿದ ಅವರು, ತಾಲೂಕು ಆಡಳಿತದಿಂದ ಆಚರಣೆ ಮಾಡುವ ವಿಶ್ವಕರ್ಮ ಜಯಂತಿಯಲ್ಲಿ ಸಮುದಾಯವರು ಪಾಲ್ಗೊಳ್ಳತ್ತೆವೆ. ಆದರೆ ತಾಲೂಕಿನ ಎಲ್ಲಾ ಸರಕಾರಿ ಶಾಲಾ ಕಾಲೇಜು ಮತ್ತು ಕಛೇರಿಗಳಲ್ಲಿ ಜಯಂತಿ ಆಚರಿಸಲು ಸೂಚಿಸಬೇಕು. ಹಿಂದಿನ ವರ್ಷ ಕೆಲವು ಗ್ರಾಮ ಪಂಚಾಯತ್ ಮತ್ತು ತಾಲೂಕು ಕಛೇರಿಯಲ್ಲಿ ಆಚರಣೆ ಮಾಡಲಿಲ್ಲ. ಹಾಗಾಗಿ ಈ ಬಾರಿಯೂ ಅಂತಹ ಲೋಪವಾಗದಂತೆ ಸೂಚಿಸಬೇಕು ಎಂದು ಹೇಳಿದರು. ಇನ್ನೂ ಸಮುದಾಯದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಈ ತಿಂಗಳಲ್ಲಿ ಆಚರಣೆ ಮಾಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ತಹಶಿಲ್ದಾರ ಬಿ.ಎಸ್ ಕಡಕಬಾವಿ ಅವರು, ಸಮಾಜ ಸುಧಾರಕರು ಯಾವುದೇ ಜಾತಿಗೆ ಸೀಮಿತವಲ್ಲ.ಹಾಗಾಗಿ ಪ್ರತಿ ವರ್ಷದಂತೆ ಮತ್ತು ಸರಕಾರದ ನಿರ್ದೇಶನದಂತೆ ವ್ಯವಸ್ಥಿತವಾಗಿ ವಿಶ್ವಕರ್ಮ ಜಯಂತಿ ಆಚರಣೆ ಮಾಡಬೇಕು ಎಂದು ತಾಲೂಕು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ಶಾಲಾ, ಕಾಲೇಜು ಮತ್ತು ಕಛೇರಿಗಳಲ್ಲಿ 9 ಘಂಟೆಗೆ ಆಚರಣೆ ಮಾಡಬೇಕು. ತದನಂತರ ತಾಲೂಕು ಆಡಳಿತ ಸೌಧದಲ್ಲಿ 10 ಘಂಟೆಗೆ ಜರುಗುವ ವಿಶ್ವಕರ್ಮ ಜಯಂತಿಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರೂಪಣೆ ಶಿರಸ್ತೆದಾರ ಬಿ.ಎ ರಾವೂರ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೋಸಮನಿ ಹಾಗೂ ತಾಲೂಕು ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.