ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಶಿಲ್ಪ ನಾಗ್.
ಕಾಡಂಚಿನ ಗ್ರಾಮದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ; ಶಿಲ್ಪಾ ನಾಗ..
ಹನೂರು : ತಾಲೂಕಿನಲ್ಲಿ ಹೆಚ್ಚಾಗಿ ಕಾಡಂಚಿನ ಗ್ರಾಮಗಳಿದ್ದು ಅಲ್ಲಿನ ಸಾರ್ವಜನಿಕರು ಈಗಲೂ ಕೂಡ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಕಾರಣ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಕಾರಣವಾಗಿದೆ. ಶಾಸಕರು ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ರವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಂಚಿನ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲೇಬೇಕು ಎಂದು ಪಣ ತೊಟ್ಟು ಮಹದೇಶ್ವರ ಬೆಟ್ಟದ ನಾಗಮಲೆ ಸಭಾಂಗಣದಲ್ಲಿ ಮುರರಿಂದ ನಾಲ್ಕು ಗಂಟೆಗಳ ಕಾಲ ದೀರ್ಘ ಸಭೆ ನಡೆಸಿ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು ಕಾಡಂಚಿನ ಗ್ರಾಮದ ಸಾರ್ವಜನಿಕರಿಗೆ ಮೂಲ ಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೀರು ಪೂರೈಕೆ ಚೆಕ್ ಡ್ಯಾಮ್ ಗಳು ಹಾಗು ಜಲ ಸಂಜೀವಿನಿ ಕುರಿತು ಶೀಘ್ರವೇ ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಮಾಡಿದರು ಕಾಡಂಚಿನ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಸಮರ್ಪಕವಾಗಿ ತಲುಪಬೇಕು. ಬೋರ್ವೆಲ್ ಕೊರೆಸುವ ಕುರಿತು ಶೀಘ್ರವೇ ಕ್ರಮ ತೆಗೆದು ಕೊಳ್ಳಬೇಕು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ ಸರ್ಕಾರಿ ಕೆಲಸಗಳಿಗೆ ಯಾರು ಅಡ್ಡಿ ಮಾಡದಂತೆ ಸೂಚನೆ ನೀಡಿದರು ಅರಣ್ಯ ಇಲಾಖೆ ಕಾರಣ ಇದೆ ಅಂತ ಯಾರು ನನಗೆ ಕೇಳಬಾರದು ಒಂದು ವಾರದೊಳಗೆ ನನಗೆ ವರದಿ ನೀಡಬೇಕು ಎಂದರು. ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಯ ಮಾಹಿತಿ ಪಡೆದುಕೊಳ್ಳಿ ಶ್ರದ್ದೆ ಇಂದ ಕೆಲಸ ಮಾಡಿ ಯಾವುದೇ ಕಾರಣಕ್ಕೂ ನಾನು ಇಲ್ಲಿನ ಸಮಸ್ಯೆ ಬಗೆಹರಿಸದೆ ಬಿಡುವುದಿಲ್ಲ ಇನ್ನು ಒಂದು ವಾರದೊಳಗೆ ಮತ್ತೆ ಸಭೆ ಕರೆಯುತ್ತೇನೆ ಆಗ ಕೆಲಸ ಪ್ರಾರಂಭ ಆಗಿರಬೇಕು ಸುಮಾರು ವರ್ಷದಿಂದ ಈ ಸಮಸ್ಯೆ ಇಂಗೆ ಉಳಿದಿದೆ ಆಗಾಗಿ ಈ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.
ತುಳಸಿ ಕೆರೆ ಇಂಡಿಗನತ್ತ ವಡಕೆ ಹಳ್ಳ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲ ಕಾಡಂಚಿನ ಗ್ರಾಮದಲ್ಲಿ ಖಾತೆ ವಿಚಾರ ಸಂಬಂಧವಾಗಿ ಜನರ ಮೂಲಭೂತ ಸೌಕರ್ಯದ ಕೆಲಸ ವಿಳಂಬ ವಾಗುತ್ತಿದೆ ಎಂದು ಹೊನ್ನೂರ್ ಪ್ರಕಾಶ್ ಅಸಮಾಧಾನ ವ್ಯಕ್ತ ಪಡಿಸಿ ಪ್ರಶ್ನೆ ಮಾಡಿದರು ಮೂರು ತಿಂಗಳ ಓಳಗೆ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಸಂಬಂಧ ಪಟ್ಟ ಇಲಾಖೆಗೆ ಆದೇಶ ಮಾಡಿದರು ಸರ್ಕಾರದ ಗಮನಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಖಂಡಿತ ಕೆಲಸ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದರು. ಚಂಗಡಿ ಸ್ಥಳತರ ಕುರಿತು ಮಾತನಾಡಿ ಸಭೆ ಮಾಡಿದ್ದೇವೆ ಪೂರ್ಣ ಸರ್ವೇಯ ಮಾಹಿತಿ ಪಡೆದಿದ್ದೇವೆ ಸ್ಥಳ ನಿಗದಿ ಆಗಿದೆ 200 ಕುಟುಂಬಗಳು ಇದ್ದು ಮೂಲಭೂತ ಸೌಕರ್ಯ ಇಲ್ಲದೆ ಎಲ್ಲಾ ನಗರ ಪ್ರದೇಶಕ್ಕೆ ಗುಳೆ ಹೋಗಿದ್ದಾರೆ ಕೆಲವರು ಬರೋದಿಲ್ಲ ಅಂತ ಹೇಳುವವರು ಇದ್ದರು ಆ ಸಮಯದಲ್ಲಿ ರೈತ ಸಂಘ ಚಂಗಡಿ ಗ್ರಾಮಸ್ಥರ ಮನವೊಲಿಸಿದ್ದೇವೆ ಸರ್ಕಾರ ಆದೇಶ ಕೊಟ್ಟರು ಕೂಡ 36 ಕೋಟಿ ಹಣ ಬಿಡುಗಡೆ ಹಾಗಿಲ್ಲ ಸರ್ಕಾರದ ನಿರ್ಲಕ್ಷ ಎದ್ದು ಕಾಣುತ್ತಿದೆ. ಇಷ್ಟೆಲ್ಲ ವರ್ಷ ವಿಳಂಬ ಆಗಿದೆ ಸರ್ಕಾರದ ಮೇಲೆ ನಂಬಿಕೆ ಹೋಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಬರುತ್ತೇವೆ ಎನ್ನುತ್ತಿದ್ದವರು ಇವಾಗ ಬರುವುದಿಲ್ಲ ಎನ್ನುವುದಕ್ಕೆ ಶುರು ಮಾಡಿದ್ದಾರೆ ಆಗಾಗಿ ಅತೀ ಶೀಘ್ರದಲ್ಲಿ ಮಾಡಿ ಎಂದು ಜಿಲ್ಲಾಡಕಾರಿ ಗಳಿಗೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಮನವಿ ಮಾಡಿದರು..ಗ್ರಾಮದವರಿಗೆ ಆದೇಶ ಹೋರಾಡಿಸಿರುವ ಮೂರು ರೀತಿಯ ಪ್ಯಾಕೇಜ್ ರೀತಿಯಲ್ಲಿ ಅತೀ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾತನಾಡುತ್ತೇನೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.
ಅರಣ್ಯ ಅಧಿಕಾರಿಗಳ ಜೊತೆ ರೈತರ ಮಾತುಕತೆ : ದನಗಳನ್ನು ಯಾಕೆ ಕಾಡಿನ ಒಳಗೆ ಬಿಡುತ್ತಿಲ್ಲ ನೀವು ದೊಡ್ಡಿ ಹಾಕುವುದಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು ಗಂಧದ ಮರ ಕಡಿಯುತ್ತಿದ್ದಾರೆ ಅಕ್ರಮ ಚಟುವಟಿಕೆ ನಡೆಯುತ್ತಿದೆ ಲೋಕಲ್ ದನಗಳನ್ನು ನಾವು ತೊಂದರೆ ಕೊಡುತ್ತಿಲ್ಲ ಜಮೀನಿನ ಪಕ್ಕದಲ್ಲಿ ಹಾಕೊಳ್ಳಿ ಆದರೆ ದೂರದಲ್ಲಿ ಮಾಡುವುದರಿಂದ ತೊಂದರೆ ಆಗುತ್ತದೆ ಸೆನ್ಸಸ್ ಮಾಡಿ ಎಷ್ಟು ಮೂಲ ದನಗಳನ್ನು ಗುರುತಿಸಿ ಒಳಗೆ ಮೇಯಲು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಡಿ ಎಫ್ ಓ ಸಂತೋಷ್ ಹೇಳಿದರು ಇನ್ನು ಇದೆ ಸಂದರ್ಭದಲ್ಲಿ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಮಲೆಮಹದೇಶ್ಚರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಉಪ ವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಗುರುಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.