ರಾಯಚೂರು: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಜ.೦೫ ರಿಂದ ಜ.೧೯ ರವರೆಗೆ ವೀಕೆಂಡ್ ಸೇರಿದಂತೆ ರಾತ್ರಿ ಕರ್ಫ್ಯೂ ಆದೇಶ ಮತ್ತು ಮಾಸ್ಕ್, ಸಾಮಾಜಿಕ ಅಂತರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಅಧ್ಯಕ್ಷರಾದ ಡಾ. ಅವಿನಾಶ ಮೇನನ್ ಅವರು ಇಂದು ಆದೇಶ ಹೊರಡಿಸಿದ್ದಾರೆ.
೫ ರಿಂದ ೧೯ ರವರೆಗಿನ ಅವಧಿಯಲ್ಲಿ ಎರಡು ವೀಕೇಂಡ್ ಕರ್ಫ್ಯೂ ಜಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಜ.೦೭ (ಶುಕ್ರವಾರ) ರಾತ್ರಿ ೧೦ ಗಂಟೆಯಿಂದ ಜ.೧೦ (ಸೋಮವಾರ) ಬೆಳಿಗ್ಗೆ ೫ ಗಂಟೆವರೆಗೆ ವೀಕೇಂಡ್ ಕರ್ಫ್ಯೂ ವಿಧಿಸಲಾಗಿದೆ. ಜ.೧೪ ರಾತ್ರಿ ೧೦ ಗಂಟೆಯಿಂದ ಜ.೧೭ ಮುಂಜಾನೆ ೫ ಗಂಟೆವರೆಗೆ ಎರಡನೇ ವೀಕೇಂಡ್ ಕರ್ಫ್ಯೂ ನಿರ್ವಹಿಸಲಾಗುತ್ತದೆ. ಈ ಅವಧಿಯಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸೇವೆಗಳನ್ನು ನಿಷೇಧಿಸಲಾಗಿದೆ. ರೆಸ್ಟೋರೆಂಟ್‌ಗಳಿಗೆ ಪಾರ್ಸೆಲ್ ನೀಡಲು ಅವಕಾಶ ಮಾಡಲಾಗಿದೆ.ಮನೆಯಿಂದ ಹೊರಗೆ ಚಲನವಲನ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕಛೇರಿಗಳು ಸೋಮವಾರದಿಂದ ಶುಕ್ರವಾರವರೆಗೆ ನಿರ್ವಹಿಸಲಾಗುತ್ತದೆ. ೫ ದಿನಗಳ ಕಾಲ ಬಾರ್, ರೆಸ್ಟೋರೆಂಟ್, ಚಲನಚಿತ್ರ ಮಂದಿರ ಇತ್ಯಾದಿ ಸ್ಥಳಗಳಲ್ಲಿ ಶೇ.೫೦ ರಷ್ಟು ನೀಡಲಾಗುತ್ತದೆ. ಎರಡು ಡೋಸ್ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಸಂಪೂರ್ಣವಾಗಿ ಪ್ರವೇಶ ನಿರ್ಬಂಧಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಇತರೆ ಸೇವೆಗಳು ಅನುಮತಿಸಲಾಗಿರುವುದಿಲ್ಲ. ಈಜುಕೋಳ, ಜಿಮ್, ಶೇ.೫೦ ರಷ್ಟು ಮಾತ್ರ ನಿರ್ವಹಿಸುವಂತೆ ಲಸಿಕೆ ಕಡ್ಡಾಯವಾಗಿ ಪಡೆದಿರುವುದನ್ನು ಖಾತ್ರಿ ಪಡೆಸಿಕೊಳ್ಳುವಂತೆ ಸೂಚಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಕ್ರೀಡೆ, ವಿಚಾರ ಸಂಕೀರ್ಣ ಮತ್ತು ಇತರೆ ಕಾರ್ಯಕ್ರಮಗಳಿಗೆ ಶೇ.೫೦ ರಷ್ಟು ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ತರಹದ ರ್ಯಾಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳ ಮತ್ತು ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೇ ೨೫೦ ರೂ., ಇತರೆಡೆ ೧೦೦ ರೂ. ದಂಡ ವಿಧಿಸಲಾಗುತ್ತದೆಂದು ಆದೇಶದಲ್ಲಿ ತಿಳಿಸಲಾಗಿದೆ. ನಾಳೆ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೂ ವೀಕೇಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.