ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ
ಮಹಾಪೌರರರಾಗಿ ಮಹೇಜಬಿನ ಹೊರ್ತಿ ಆಯ್ಕೆ ಉಪಮಹಾಪೌರರಾಗಿ ಎಸ್.ದಿನೇಶ ಆಯ್ಕೆ.
ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಮಹಾಪೌರರಾಗಿ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಹಾಗೂ ಉಪ ಮಹಾಪೌರರಾಗಿ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಬಿ.ಶೆಟ್ಟೆಣ್ಣವರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಹೇಜಬಿನ ಗಂ.ಅಬ್ದುಲರಜಾಕ ಹೊರ್ತಿ ಅವರ ಪರವಾಗಿ 22 ಸದಸ್ಯರ ಮತ ಚಲಾಯಿಸಿದ್ದರಿಂದ ಹಾಗೂ ಉಪಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಎಸ್.ದಿನೇಶ ತಂ. ಸೋಮನಿಂಗಯ್ಯ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.
ನಿಗದಿಯಂತೆ ಮಂಗಳವಾರ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಮಹಾಪೌರ ಸ್ಥಾನಕ್ಕೆ 2 ಅಭ್ಯರ್ಥಿಗಳಿಂದ 5 ನಾಮಪತ್ರಗಳು ಸ್ವೀಕೃತವಾಗಿದ್ದವು. ಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ 5 ನಾಮಪತ್ರ ಹಾಗೂ ಉಪಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ 2 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಮದ್ಯಾಹ್ನ 1 ಗಂಟೆಗೆ ಮತದಾನ ಪ್ರಕ್ರಿಯೆಯಲ್ಲಿ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಮಹೇಜಬಿನ ಗಂ. ಅಬ್ದುಲರಜಾಕ ಹೊರ್ತಿ ಅವರ ಪರವಾಗಿ 22 ಜನ ಸದಸ್ಯರು ಮತ ಚಲಾಯಿಸಿದ್ದರಿಂದ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮಹಾಪೌರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆಂದು ಘೋಷಿಸಲಾಗಿದೆ.
ಮಹಾಪೌರ ಸ್ಥಾನಕ್ಕೆ ರಶ್ಮಿ ಗಂ.ಬಸವರಾಜ ಕೋರಿ ಅವರು 02 ನಾಮಪತ್ರಗಳು ಸಲ್ಲಿಸಿದ್ದರು ಇವರ ವಿರೋಧವಾಗಿ 22 ಜನ ಸದಸ್ಯರು ಮತ ಚಲಾಯಿಸಿದರು ಎಂದು ಅವರು ತಿಳಿಸಿದ್ದಾರೆ.