ವಿಜಯಪುರ : ಜಿಲ್ಲಾ ಡಿ ಎಸ್ ಎಸ್ ಅಧ್ಯಕ್ಷರಾಗಿ ಗುಣಕಿ ಆಯ್ಕೆ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ ಅವರು ವಿಜಯಪುರ ಜಿಲ್ಲಾ ಸಂಚಾಲಕರನ್ನಾಗಿ ವಾಯ್ ಎಸ್ ಗುಣಕಿ ಅವರನ್ನು ಆಯ್ಕೆ ಮಾಡಿ ಆದೇಶ ಹೋರಡಿಸಿದರು.
ಇಂದು ನಗರದ ಕಾಮತ್ ಹೋಟೆಲ್ ನಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕರು ಕರೆದ ತುರ್ತು ಸಭೆಯಲ್ಲಿ ಜಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಭೀಮವಾದ ಸಂಘಟನೆಯ ಬಲವರ್ಧನೆಗೆ ಯಲ್ಲಾ ಇವಕರು ಕೈ ಜೋಡಿಸಬೇಕು ಎಂಬ ಮಾತಿನ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು ಈ ಸಂದರ್ಭದಲ್ಲಿ ನಗರದ ಯುವಕರು ಮುಖಂಡರುಗಳು ಬಾಗಿಯಾಗಿದ್ದರು…