ರಾಯಚೂರು: ನಗರದ ಮುಖ್ಯ ರಸ್ತೆಗಳ ವಿದ್ಯುತ್ ಕಂಬಗಳಿಗೆ ಮಿನುಗು ದೀಪಗಳ ಸುತ್ತಿದ ಕಾಮಗಾರಿಗಳಿಗೆ ಸಂಬಂಧಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಅಂದಾಜು ಪತ್ರದ ದಾಖಲೆ ಮತ್ತು ಯಾರಿಗೆ ಈ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಕೇಳಿದ ಘಟನೆ ಇಂದು ಸಭೆಯಲ್ಲಿ ನಡೆಯಿತು.ಕಳೆದ ೧೫ ತಿಂಗಳಲ್ಲಿ ನಡೆದ ೩ ನೇ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರು, ಅಧ್ಯಕ್ಷ ವೈ.ಗೋಪಾಲರೆಡ್ಡಿ, ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಕಾಮಗಾರಿಗೆ ಸಂಬಂಧಿಸಿ ಮಾಹಿತಿ ನೀಡುವಂತೆ ಆಗ್ರಹಿಸಿದರು. ಈ ಕಾಮಗಾರಿ ಕೈಗೊಳ್ಳುವ ಪೂರ್ವ ಸದಸ್ಯರ ಗಮನಕ್ಕೆ ಮಾಹಿತಿ ನೀಡಲಿಲ್ಲವೇಕೆ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು. ಕಾಮಗಾರಿಯನ್ನು ಯಾರಿಗೆ ನೀಡಲಾಗಿದೆ. ಎಷ್ಟು ಹಣ ಖರ್ಚು ಮಾಡಲಾಗಿದೆ ಎನ್ನುವ ಲೆಕ್ಕಪತ್ರ ನೀಡುವಂತೆ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮತ್ತು ಆಯುಕ್ತರು ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ಹೇಳಿದರು.
ಈ ಸಭೆಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಸಂಬಂಧಿಸಿ ಸದಸ್ಯರಿಂದ ಅನೇಕ ಮಾಹಿತಿಗಳನ್ನು ಕೇಳಲಾಯಿತು. ಕೆಲವೆಡೆ ಉದ್ಯಾನವನ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು ಎಂದು ವಿವರಿಸುವಂತೆ ಅಧಿಕಾರಿಗಳನ್ನು ಕೇಳಲಾಯಿತು. ವಿವಿಧ ಬ್ಯಾಂಕ್ ಖಾತೆಗಳಿಂದ ವರ್ಗಾವಣೆಗೊಂಡ ವಿವರ ಅಭಿವೃದ್ಧಿ ವಿಷಯದಲ್ಲಿ ಸದಸ್ಯರನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಏಕೆ ನೀಡುತ್ತಿಲ್ಲವೆಂದು ಸಭೆಯಲ್ಲಿ ಕೇಳಲಾಯಿತು. ಈ ಸಭೆಯಲ್ಲಿ ಕೆಲ ಸದಸ್ಯರು ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಕೋರಿದರು. ಈ ಸಭೆಯಲ್ಲಿ ಅನೇಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಅಂಗೀಕರಿಸಲಾಯಿತು.