ಇಂಡಿ : ಕಾಲೇಜು ವಿದ್ಯಾರ್ಥಿಗಳಿಗೆ ಸಿಂಧೂರ, ಕುಂಕುಮಕ್ಕೆ ನಿರಾಕರಣೆ ಮಾಡಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಇಂಡಿ ಡಿಗ್ರಿ ಕಾಲೇಜು ಪ್ರಾಚಾರ್ಯ ಬಿ. ಎಸ್ ಪಟ್ಟೇದ ಸ್ಪಷ್ಟನೆ ನೀಡಿದ್ದಾರೆ.
ಇಂಡಿ ಪಟ್ಟಣದಲ್ಲಿ ಮಾತನಾಡಿದ ಅವರು, ಕೆಲ ವಿದ್ಯಾರ್ಥಿಗಳು ನಮ್ಮ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿದ್ದಾರೆ. ಆದ್ದರಿಂದ ಇಂದು ಕೆಲ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನನ್ನ ಜೊತೆ ಮಾತಿನ ಚಟಾಪಟಿ ನಡೆಸಿದ್ದಾರೆ. ನಮ್ಮ ಕಾಲೇಜಿನಲ್ಲಿ ಯಾವುದೆ ಸಮಸ್ಯೆ ಇಲ್ಲ. ಎಲ್ಲರು ಸೌಹಾರ್ದಯುತವಾಗಿ ಇದ್ದೇವೆ. ಆ ವಿದ್ಯಾರ್ಥಿಗಳಿಗೂ ತಿಳಿ ಹೇಳಿ ಕಾಲೇಜಿಗೆ ಹಾಜರು ಮಾಡಿಸಿದ್ದೇವೆ ಎಂದರು.