ಅಫಜಲಪೂರ : ತಾಲೂಕಿನ ಕರಜಗಿ ಗ್ರಾಮದ ವಿದ್ಯಾದರ್ಶನ ನವೋದಯ ತರಬೇತಿ ಕೇಂದ್ರದ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯಕೊಡಿ ೭೩ ನೇ ಗಣರಾಜ್ಯೋತ್ಸವದ ದ್ವಜಾರೊಹಣವನ್ನು ನೇರೆವರಿಸಿದರು. ತದನಂತರ ಅವರು ಮಾತಾನಾಡಿ, ವಿಧ್ಯಾರ್ಥಿಗಳು ಈ ದೇಶದ ಭವಿಷ್ಯ, ಶಕ್ತಿ, ಅವರಿಗೆ ರಾಷ್ಟ್ರ ಪ್ರೇಮ, ದೇಶ ಭಕ್ತಿಯ ಅಭಿಮಾನ ಮೂಡಿಸಬೇಕು. ಅದು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ ಎಂದು ಹೇಳಿದರು.
ಅಕ್ಷರ ಜ್ಞಾನದ ಜೊತೆಗೆ ಪರಿಸರ ಮತ್ತು ಸಾಮಾಜಿಕ ಜ್ಞಾನ ನೀಡುವುದು ಅತೀ ಅವಶ್ಯಕ ಎಂದು ಹೇಳಿದರು. ಇದೇ ಸಂದರ್ಭದ ನೂತನವಾಗಿ ಎಸ್ ಐ ಹುದ್ದೆಗೆ ಅಯ್ಕೆಯಾಗಿರುವ ಇಸ್ಮಾಯಿಲ್ ಜಮಾದಾರ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಕ ಅಸ್ಫಾಕ ಗಬಸಾವಳಗಿ, ವೈಜನಾಥ ಗೌರ, ಶೃತಿ ಕುಡಿಗನೂರ, ಭಾಗ್ಯಶ್ರೀ, ಸ್ವೇತಾ, ವಾಣಿಶ್ರೀ, ನಿಲಮ್ಮಾ ನಾವಿ, ಗ್ರಾಮದ ಮುಖಂಡ ಗುಂಡಪ್ಪಾ ಯಮಗಾರ,
ಭಗವಂತ ಕರೂಟಿ, ನರೇಂದ್ರ ಲೋಣಾರ, ಸೋಹೇಲ್ ಚೌಧರಿ, ಹುಸೇನಿ ಮುಲ್ಲಾ ಆಕಾಶ ರೋಡಗಿ ಸೈಫನ್ ಅಳ್ಳಗಿ ಹಾಗೂ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.