ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಡಾ. ಸುಧಾಮೂರ್ತಿ ಇನ್ಪೋ ಮಹಿಳಾ ಪದವಿ ಕಾಲೇಜಿನ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಹಟ್ಡಿ ಚಿನ್ನದ ಗಣಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ವಜ್ಜಲ್
ವಿಧ್ಯಾರ್ಥಿಗಳ ಜೀವನದಲ್ಲಿ ವಿಧ್ಯೆಯೊಂದಿಗೆ ಸಾಮಾಜಿಕ ಜ್ಞಾನದ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ. ನಮ್ಮದೇಶದ ಸಂಸ್ಕೃತಿ ಇಂದಿನ ವಿಧ್ಯಾರ್ಥಿಗಳ ಕೈಯಲ್ಲಿದ್ದು,
ವಿಧ್ಯಾರ್ಥಿಗಳ ಗುರು ಹಿರಿಯರನ್ನು ಗೌರವಿಬೇಕು.ತಂದೆ ತಾಯಿರಂದ್ರೆ ನಿಜಾವಾದ ದೇವರು,ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು.
ಇಂದಿನ ತಂತ್ರಜ್ಞಾನವನ್ನು ನಿವೆಲ್ಲರೂ
ಅಳವಡಿಸಿಕೊಂಡು ತಾಂತ್ರಿಕವಾಗಿ ಮುಂದಿರಬೇಕು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅತ್ಮನಿರ್ಭರ ಭಾರತದ ಮಹತ್ವವನ್ನು ತಿಳಿಸಿ
ಕಾರ್ಯಕ್ರಮವನ್ನು ಉದ್ದೇಶಿಸಿ
ಮಾತನಾಡಿದರು.