ಹಡಪದ ಅಪ್ಪಣ್ಣನವರ ವೃತ್ತದ ಕಂಚಿನ ಮೂರ್ತಿ ಉದ್ಘಾಟನೆ
ಇಂಡಿ: ಪಟ್ಟಣದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ವೃತ್ತದ
ಕಂಚಿನ ಮೂರ್ತಿ ಉದ್ಘಾಟನೆ ಮತ್ತು ಇಂಡಿ ತಾಲೂಕಾ ಶ್ರೀ ಹಡಪದ ಅಪ್ಪಣ್ಣನವರ ಸಮಾಜದ ಜಾಗೃತಿ ಸಮಾವೇಶ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನ.9 ಗುರುವಾರದಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ
ಎಂದು ಸಿದರಾಯ ಅಪ್ತಾಗಿರಿ ತಿಳಿಸಿದ್ದಾರೆ.
ಸಮಾರಂಭಕ್ಕೆ ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ
ಭಾರತಿ ಅಪ್ಪಣ್ಣ ಶ್ರೀಗಳು, ಗುರುದೇವ ಆಶ್ರಮ
ಕಾತ್ರಾಳ ಬಾಲಗಾಂವದ ಅಮೃತಾನಂದ ಶ್ರೀಗಳು,
ಅಥರ್ಗಾ ಷಣ್ಮುಖಾರೂಢ ಮಠದ ಈಶ ಪ್ರಸಾದ
ಶ್ರೀಗಳು, ಕಕ್ಕಮರಿ ಗುರುದೇವ ಆಶ್ರಮದ ಪೂಜ್ಯ
ಆತ್ಮಾರಾಮ ಶ್ರೀಗಳು, ಇಂಡಿ ಓಂಕಾರ ಮಠದ
ಸ್ವರೂಪಾನಂದ ಶ್ರೀಗಳು, ಮಾಜಿ ಮುಖ್ಯಮಂತ್ರಿಗಳು
ಮತ್ತು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ,
ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲರು, ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಕಟಕದೊಂಡ, ಹಡಪದ ಅಪ್ಪಣ್ಣ ಸಮಾಜದ ಬೆಂಗಳೂರ ರಾಜ್ಯಾಧ್ಯಕ್ಷ ಸಿದ್ದಣ್ಣ ಹಡಪದ, ವಿಜಯಪುರದ ಜಿಲ್ಲಾಧ್ಯಕ್ಷ ಬಸವರಾಜ ಶಿವಶರಣ, ಸೋಲಾಪುರದ ಜಿಲ್ಲಾಧ್ಯಕ್ಷ ಪಂಡಿತ ಏಳಗಿ, ಶ್ರೀ ಶಾಂತೇಶ್ವರ ಟ್ರಸ್ಟದ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ, ಕಾಂಗ್ರೆಸ್ ಪಕ್ಷದ ಇಂಡಿ ಬ್ಲಾಕ್ ಅಧ್ಯಕ್ಷ ಜಾವೇದ್ ಮೋಮೀನ್, ಅಧ್ಯಕ್ಷರು ಹಡಪದ ಅಪ್ಪಣ್ಣ ಬ್ಯಾಂಕ ಮತ್ತು ಶಿಕ್ಷಣ ಸಂಸ್ಥೆ ಇಂಡಿಯ ಸಿದ್ದು ನಾವಿ, ವಿಜಯಪುರದ ನಿಂಗಪ್ಪ ನಾವಿ, ಸಿಂದಗಿಯ ಶಿವಾನಂದ ಹಡಪದ, ಚಡಚಣದ ಬಸವರಾಜ ಪರಡೆ, ತಾಳಿಕೋಟದ ಸುನೀಲ ಉಕನಾಳ, ಆಲಮೇಲದ ಶಂಕರಹಡಪದ, ಮಹಿಳಾ ಘಟಕದ ಭಾರತಿ ನಾವಿ, ಇಂಡಿ ಆಡಳಿತ ಮಂಡಳಿಯ ಸಿದ್ದು ನಾವಿ, ಶಕುಂತಲಾ ನಾವಿ, ಸಂತೋಷ ಗವಳಿ, ನಟರಾಜ ಗವಳಿ, ಶಿವಾನಂದ ನಾವಿ, ಅಶೋಕ ಹಡಪದ, ಬಸವರಾಜ ನಾವಿ, ನಾನು ರಾಠೋಡ, ಧೂಳಪ್ಪ ನಾವಿ ಪಾಲ್ಗೊಳ್ಳುವರು ಎಂದು ಹಡಪದ ಅಪ್ಪಣ್ಣ ಬ್ಯಾಂಕಿನ
ಮೂಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದರಾಯ ಅಪ್ತಾಗಿರಿ ತಿಳಿಸಿದ್ದಾರೆ.