ಇಂಡಿ: ಜಿಲ್ಲೆಯ ಸಂತ ಮಾಹಾಂತರು, ಶೈಕ್ಷಣಿಕ ಹರಿಕಾರರು, ತ್ರಿವಿಧ ದಾಸೋಹಿಗಳು ಲಿಂಗ್ಯಕ್ಯ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಶಿಕ್ಷಣ ಕ್ರಾಂತಿಗೈದ ಜಿಲ್ಲೆಯ ಸಾಧಕರು. ತಮ್ಮ ಸಾಧನೆಯನ್ನು ರಾಜ್ಯದ, ದೇಶದ ಮೂಲೆಮೂಲೆಗೂ ಅದರ ಪರಿಮಳವನ್ನು ಹರಡಿದ್ದಾರೆ. ಹಾಗೆಯೇ ಇಲ್ಲೊಬ್ಬ ಶಿಕ್ಷಕರು ವಿಧ್ಯಾರ್ಥಿಗಳಿಗೆ ಪ್ರೀತಿಯ ಗುರುಗಳಾಗಿ,ಅಪ್ತ ಸ್ನೇಹಿತನಾಗಿ,ಮಾರ್ಗದರ್ಶಕರಾಗಿ ಮಕ್ಕಳಿಗೆ ಪಾಠ-ಪ್ರವಚನಗಳನ್ನು ಮಾಡಿದ್ದರು. ಹೀಗಾಗಿ ಆ ಶಿಕ್ಷಕ ವಿಧ್ಯಾರ್ಥಿಗಳ ಅಚ್ಚುಮೆಚ್ಚಿನ ಗೆಳೆಯರಾಗಿದ್ದರು.ಅವರೇ ಪ್ರಕಾಶ ಪಾಟೀಲ್. ಇತ್ತೀಚೆಗೆ ಶಿಕ್ಷಕ ಪ್ರಕಾಶ್ ಪಾಟೀಲ್ರಿಗೆ ವರ್ಗಾವಣೆಯಾಗಿದೆ.ವರ್ಗಾವಣೆಯ ಸುದ್ದಿ ತಿಳಿದ ವಿಧ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಶಿಕ್ಷಕ ಪ್ರಕಾಶ ಪಾಟೀಲ್ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮುರಾರ್ಜಿ ವಸತಿ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಪಡೆದು ಹೋಗುತ್ತಿರುವಾಗ ವಿಧ್ಯಾರ್ಥಿಗಳ ಭಾವನಾತ್ಮಕ ಕಣ್ಣೀರ ಧಾರೆ ಹರಿಸಿದ್ದಾರೆ. ಇವರು ಮಾಡಿದ ಬೋಧನೆ, ತೋರಿಸಿದ ಪ್ರೀತಿ ಶಾಲೆ ಬಿಟ್ಟು ಬರುವಾಗ ಆ ಮಕ್ಕಳು ತಮ್ಮ ನೆಚ್ಚಿನ ಗುರುವಿನ ಮೇಲೆ ಕಣ್ಣೀರು ಹರಿಸುವ ಮೂಲಕ ತಾಯ್ತನದ ಹೃದಯವಂತಿಕೆಗೆ ಸಾಕ್ಷಿಯಾಗಿದೆ.