ಪಟ್ಟಣದಲ್ಲಿ ಸರಳವಾಗಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆ
ಹನೂರು : ಪ್ರಪಂಚದಲ್ಲಿ ಯಾವುದಾದರು ಗ್ರಂಥ ಪ್ರಚಲಿತವಾಗಿದ್ದರೆ ಅದು ರಾಮಾಯಣ ಮಹಾಭಾರತ ಕಥ ಭಾಗವಾಗಿದೆ ಅದನ್ನು ಬರೆದವರು ವಾಲ್ಮೀಕಿ ಮಹಾಋಷಿಗಳು , ವಾಲ್ಮೀಕಿಯೆಂದರೆ ಹುತ್ತದ ಮಣ್ಣು ಎಂದರ್ಥ , ಒಂದು ಕಾಲದಲ್ಲಿ ದರೋಡೆಕೋರ ರಾಗಿದ್ದವರು ಎಂದು ಹಲವಾರು ಕಥೆಗಳಲ್ಲಿ ಉಲ್ಲೇಖವಾಗಿದೆ ,ಕಾರಣ ಅಂದಿನ ಕಾಲದಲ್ಲಿ ಅವರ ಕುಟುಂಬದ ನಿರ್ವಹಣೆಗಾಗಿ ಮಾಡುತ್ತಿದ್ದರು ಇದನ್ನು ವೀಕ್ಷಿಸಿದ ಋಷಿ ಮುನಿಗಳು ರಾಮಾಯಣ ಕಥೆ ಬರೆಯಲು ಆದೇಶ ಮಾಡಿದರು, ಇಂತಹ ಮಹನಿಯರ ಜಯಂತಿ ಸಮಯದಲ್ಲಿ ,ಅದೇ ಸಮುದಾಯದ ಜನರು ಬರಬೇಕಿತ್ತು ಎಂದು ತಹಶಿಲ್ದಾರ್ ಗುರುಪ್ರಸಾದ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಡಾಕ್ಟರ್ ಪ್ರೇಮಲತಾ ಮಾತನಾಡಿ ಶ್ರೀ ರಾಮರ ಚರಿತ್ರೆಯನ್ನು ಪ್ರಪಂಚದಲ್ಲಿ ಎಲ್ಲಾ ಜನರ ಬಾಯಿಯಲ್ಲಿ ಕೆಳಬಹುದು ಅದಕ್ಕೆ ಕಾರಣ ವಾಲ್ಮೀಕಿಯವರಾದ ಆದಿ ಮಹಾಕವಿ ಎನ್ನಲಾಗಿದೆ ಇದರ ಕರ್ತೃ ಸಹ ಇವರೆ . ಇಂತಹವರ ಜಯಂತಿಯನ್ನು ಸರ್ಕಾರದಿಂದ ಅಚರಿಸುತ್ತಿರುವುದು ಬಹಳ ಸಂತೋಷದ ವಿಷಯ ಇವರು ಮೂಲತಹ ಬೇಡ ಜನಾಂಗದಕ್ಕೆ ಸೇರಿದವರು , ಬೇಡ ನಾಯಕ ದೊರೆಯ ಹೆಸರು ಪ್ರಾಚೇಶ ,ಮಡದಿ ಕನ್ನಿಕ ಇವರಿಗೆ ಮಕ್ಕಳಿಲ್ಲ ಕಾರಣ ತೇಜಸ್ವಿ ಕವಿ ಎಂಬ ಮಗು ಹುಟ್ಟಿದರು . ನಂತರ ರತ್ನಕರ ಎಂಬ ಕವಿಯಾದರು , ಸನಾತನೆ ಎಂಬವರನ್ನು ಮದುವೆಯಾಗಿ ಕಳ್ಳತನ ಮಾಡುತ್ತಿದ್ದಾಗ ನಾರದರು ಬೇಟಿಯಾಗಿ ಸನ್ಮಾರ್ಗಿ ಯಾಗಲು ಸೂಚಿಸಿದರು . ಅವರಿಗೆ ಮರ ಎಂದು ತಪಸ್ಸು ಮಾಡಲು ಹೇಳಿದರು ಆ ಪದವು ಕ್ರಮೇಣ ರಾಮ ನಾಮವಾಗಿದೆ . ಜಪ ಮಾಡುವಾಗ ಹುತ್ತದಲ್ಲಿ ಮುಳುಗಿದಾಗ ಸಪ್ತ ಋಷಿಗಳು ಆಗ್ನೇಯಂತೆ ವಲ್ಮಿಕೆಯಾಗಿ ಹೊರ ಬರುತ್ತಾರೆ ,ತಪಸ ನದಿ ತೀರಕ್ಕೆ ಆಶ್ರಮ ಕಟ್ಟಿಕೊಂಡು ವಾಸಮಾಡುತ್ತಾರೆ . ನಂತರ ಒಬ್ಬ ಬೇಡನಿಗೆ ಶಾಪ ಮಾಡಿದ್ದರು ನಂತರ ಪ್ರಾಯಶ್ಚಿತ್ತ ಮಾಡಲು ಪ್ರಾರಂಭಿಸಿದಾಗ ಬ್ರಹ್ಮನು ಇವರಿಗೆ ರಾಮಾಯಣ ಬರೆಯಲು ತಿಳಿಸಿದ್ದಾರೆ .
ಅಂದಿನ ಕಾಲದಲ್ಲಿ ಧರ್ಮ ಕಾಲವು ನಡೆದಿತ್ತು ಇದಕ್ಕೆ ರಘುವಂಶ ಕಾರಣ ರಾಮ ಲಕ್ಷ್ಮಣರ ವನವಾಸ ಮತ್ತು ರಾಜ್ಯಭಾರವು ಕಾರಣವಾಗಿದೆ . ನಮ್ಮ ಸಂಸ್ಕಾರಕ್ಕೆ ಮಣೆಯಾಕಿದ್ದ ಕಥೆಗಳಿವೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಇ ಒ ಉಮೇಶ್ . ಬಿ ಇಒ ಗುರುಲಿಂಗಯ್ಯ ,ಪರಿಶಿಷ್ಟ ಇಲಾಖೆಯ ಅಧಿಕಾರಿ ರಾಜೇಶ್, ವ್ಯವಸ್ಥಾಪಕ ಮಹೇಶ್ . ಆರ್ ಐ ಗಳಾದ ಮಹಾದೇವ ಸ್ವಾಮಿ . ಶೇಷಣ್ಣ, ಎ ಡಿ, ಅಧಿಕಾರಿಗಳಾದ ಲೋಕೇಶ್ , ಮಾರುತಿ ,ಶಿಕ್ಷಕರಾದ ವೆಂಕಟಾಚಲ ಸೇರಿದಂತೆ ಇನ್ನಿತರರು ಹಾಜರಿದ್ದರು .