ಇಂಡಿ : ಕಂದಾಯ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರೈತಾಪಿ ವರ್ಗಕ್ಕೆ ಮನೆ ಬಾಗಿಲಿಗೆ ದಾಖಲೆ ಕಾರ್ಯಕ್ರಮ ಚಾಲನೆ ಸಿಕ್ಕಿದೆ. ಆದರೆ ತಳವಾರ ಸಮುದಾಯದ ಜನರ ಕೂಗು ಕೇಳೋರು ಯಾರು..? ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಈ ಹಿನ್ನಲೆಯಲ್ಲಿ ಇಂಡಿ ತಾಲೂಕಿನ ಸೋನಕನಹಳ್ಳಿ ಗ್ರಾಮದಲ್ಲಿ ತಳವಾರ ಸಮುದಾಯದ ಯುವಕರು ಪ್ರವರ್ಗ ೧ ರ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 40 ವರ್ಷಗಳ ಹೋರಾಟದ ಫಲವಾಗಿ ಇತ್ತಿಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡಲು ಆದೇಶ ಹೋರಡಿಸಿದೆ. ಆದರೆ ಅಧಿಕಾರಿಗಳು ಮಾತ್ರ ಸರಕಾರದ ಸುತ್ತೊಲೆ, ರಾಜ್ಯಪತ್ರ ಮತ್ತು ಮಾರ್ಗ ಸೂಚಿ ಪಾಲಿಸದೇ ಅರ್ಜಿಗಳನ್ನು ತಿರಸ್ಕರಿಸಿ ನಮ್ಮ ಸಮುದಾಯಕ್ಕೆ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದ್ದು ನಮ್ಮ ಸಮುದಾಯದ ಯುವಕರಿಗೆ ಜಾತಿ ಪ್ರಮಾಣ ಪತ್ರ ಸಿಗದೇ ವಂಚಿತರಾಗುತ್ತಿದ್ದಾರೆ. ಕಾನೂನು ಸಂವಿಧಾನ ರಕ್ಷಣೆ ನೀಡಿ ಮತ್ತು ಸಂವಿಧಾನ ಬದ್ದವಾಗಿ ನೀಡಬೇಕಾದ ಪ್ರಮಾಣ ಪತ್ರ ನೀಡದೇ ಸುಖಾ ಸುಮ್ನೆ ತೊಂದರೆ ಮಾಡುತ್ತಿದ್ದಾರೆ ಎಂದು ಅಕ್ರೋಷ ಪಡಿಸಿದರು.
ಇತ್ತೀಚಿಗೆ ಗ್ರಾಮ ಲೆಕ್ಕಾಧಿಕಾರಿಗಳು ನೀಡಿದ ಪಹಣಿ, ವಾಸಸ್ಥಳ ಪ್ರಮಾಣ ಪತ್ರದ ಜೊತೆಗೆ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದು, ಅವುಗಳನ್ನು ಹರಿದು ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ಹಾಕಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಮ್ಮ ಸಮುದಾಯದ ಮತ ಬೇಕು. ಆದರೆ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮಾತ್ರ ಸಿಗುತ್ತಿಲ್ಲ. ನಮ್ಮ ಸಮುದಾಯಕ್ಕೆ ಕೂಡಲೇ st ಪ್ರಮಾಣಪತ್ರ ಒದಗಿಸಬೇಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಲಕಾರಿ ಶ್ರೀ ತಳವಾರ, ಯಲ್ಲಪ್ಪ ಕ ಕೋಳಿ, ಸುರೇಶ ತಳವಾರ, ಸಿದ್ದು ತಳವಾರ, ಮಹೇಶ್ ಗೋಳಗಿ , ಚಿದಾನಂದ ಕೋಳಿ, ಪರಶುರಾಮ ಕೋಳಿ, ಭೀರಪ್ಪ ತಳವಾರ, ಸಿದ್ದು ಗೋಳಗಿ, ಕುಮಾರ ಗೋಳಗಿ ಉಪಸ್ಥಿತರು.