ವಿಜಯಪುರ : ಮುರುಘಾ ಶ್ರೀಗಳ ಮೇಲೆ FIR ಆಗಲ್ಲ ಎಂದು ವಿಜಯಪುರದಲ್ಲಿ ಸಚಿವ ಉಮೇಶ ಕತ್ತಿ ಶ್ರೀಗಳ ಪರ ಬ್ಯಾಟಿಂಗ್ ಮಾಡಿದರು. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಮುರುಘಾ ಶ್ರೀಗಳ ಮೇಲೆ FIR ಆಗಲ್ಲ. ಆದ್ರೇ, ನೋಡೋಣ, ಇದು ಒಳ ಜಗಳ ಆಗಿದೆ. ಬಸವರಾಜ್ ಹಾಗೂ ಮುರುಘಾ ಶ್ರೀಗಳ ಜಗಳವಾಗಿದ್ದು, ಇದರ ಮೇಲೆ ರಾಡಿ ಹಚ್ಚಿ ಎಲ್ಲೆಲ್ಲೂ ಹೋಗ್ತಾ ಇದೆ ಎಂದರು. ಅಲ್ಲದೇ, ಮುರುಘಾ ಶ್ರೀಗಳ ಮೇಲೆ ಆರೋಪ ಮಾಡಿದ್ದು ತಪ್ಪು. ಇರೋರು ಎರಡು ಮೂರು ಶ್ರೀಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಸಲ್ಲದು ಎಂದರು.