ಕೃಷ್ಣಾನದಿಯ ಬಿದ್ದ ಟಿಪ್ಪರ್ ಇಬ್ಬರು ಸಾವು..!
ವಿಜಯಪುರ: ಕೃಷ್ಣಾನದಿಯ ಸೇತುವೆ ಮೇಲಿಂದ ನದಿಗೆ ಬಿದ್ದ ಟಿಪ್ಪರ್ ಬಿದ್ದು ಇಬ್ಬರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿರೋ ಕೃಷ್ಣಾನದಿಯ ಸೇತುವೆ ಬಳಿ ನಡೆದಿದೆ. ನದಿಗೆ ಅಡ್ಡಲಾಗಿ ನಿರ್ಮಾಣವಾಗಿರೋ ಮೂರು ಕಿಮೀ ವ್ತಾಪ್ತಿಯ ಬೃಹತ್ ಸೇತುವೆ ಇದಾಗಿದೆ. ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿದ್ದ, ಚಾಲಕ ಸಚಿನ್ (32) ಕ್ಲೀನರ್ ಪರಶುರಾಮ (30) ಮೃತಪಟ್ಟಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.