ನಿವೃತ್ತ ಯೋಧ ಸೋಮಶೇಖರಗೆ ಸನ್ಮಾನ
ಇಂಡಿ: ಸೈನಿಕರು ತಮ್ಮ ಜೀವನವನ್ನೇ ಪಣವಾಗಿ ಇಟ್ಟುಕೊಂಡು ಕಣ್ಣಲ್ಲಿ ಕಣ್ಣಿಟ್ಟು ಗಡಿಯನ್ನು ಕಾಯುತ್ತಿರುವುದರಿಂದಲೇ ನಾವು ಇಂದು ನಮ್ಮ ದೇಶದಲ್ಲಿ ನೆಮ್ಮದಿಯಿಂದ, ಶಾಂತಿಯಿಂದ, ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಶಿಕ್ಷಕ ರಮೇಶ ಮುಂಜಣ್ಣಿ ಹೇಳಿದರು.
ಅವರು ತಾಲೂಕಿನ ಬೋಳೆಗಾವ್ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಸೋಮಶೇಖರ್ ಕೋಟೆನವರ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸೈನಿಕರು ಕೇವಲ ಗಡಿ ಕಾಯುವ ಕೆಲಸದ ಜೊತೆಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ ಎಂದು ಯುವ ರೈತ ಬೀರಣ್ಣ ಹಳ್ಳಿ ಹೇಳಿದರು.
ರೈತ ದೇಶಕ್ಕೆ ಅನ್ನ ನೀಡಿದರೆ ಸೈನಿಕ ನಮ್ಮ ದೇಶದ ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಇಬ್ಬರೂ ನಮ್ಮ ದೇಶದ ಬೆನ್ನೆಲುಬು ಇದ್ದಂತೆ ಎಂದು ಶಿಕ್ಷಕ ಬಸವರಾಜ ಬಿರಾದಾರ ಹೇಳಿದರು.
ಇದೇ ಸಂದರ್ಭದಲ್ಲಿ ಸುದೀರ್ಘ 20 ವರ್ಷಗಳ ಕಾಲ ದೇಶವನ್ನು ಕಾಪಾಡಿದಂತಹ ವೀರ ಯೋಧನಿಗೆ ಸನ್ಮಾನವನ್ನು ಮಾಜಿ ಸೈನಿಕ ಮೃತ್ಯುಂಜಯ ಹಿರೇಮಠ ನೆರವೇರಿಸಿದರು..
ಕಾರ್ಯಕ್ರಮದ ಸ್ವಾಗತ ಕಾಶಿನಾಥ ಹುಣಸಗಿ, ಪ್ರಾಸ್ತಾವಿಕ ಶಿಕ್ಷಕ ಪ್ರಶಾಂತ ತಳವಾರ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರ ಯೋಧ ಸೋಮಶೇಖರ ಮಾತನಾಡಿ, ಜಮ್ಮು ಕಾಶ್ಮೀರ, ಅಲಹಾಬಾದ್, ಹೈದರಾಬಾದ, ಉತ್ತರ ಪ್ರದೇಶ, ಮಧ್ಯಪ್ರದೇಶ ಹೀಗೆ 10 ಹಲವಾರು ಕಡೆ ಕೆಲಸ ಮಾಡಿದ ಅನುಭವ ಸ್ಮರಿಸಿದ ಅವರು ನೀವು ನನಗೆ ಸನ್ಮಾನ ಮಾಡಿದ್ದು ನೋಡಿದರ ನನಗ ಈಗ ಅನಿಸುತ್ತಿದೆ ನಾನು ಒಂದು ದೊಡ್ಡ ಸಾಧನೆ ಮಾಡಿ ಬಂದಿದ್ದೇನೋ ಅಂತ ಅನಿಸುತ್ತಿದೆ ನೀವು ನೀಡಿದ ಈ ಒಂದು ಅಭಿಮಾನಕ್ಕೆ ನಾನು ತುಂಬಾ ಚಿರಋಣಿಯಾಗಿದ್ದೇನೆ. ಜನಸೇವೆಯೇ ದೇಶ ಸೇವೆ ಎಂದುಕೊಂಡಿದ್ದ ನಾನು ಯಾವಾಗಲೂ ಈ ಭೂಮಿ ತಾಯಿಗೆ ಚಿರಋಣಿಯಾಗಿರುವೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಕಪ್ಪ ಗುಂಜುಟಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಶಂಕರ ಕಪ್ಪೆನವರ, ಪ್ರಭು ಸಾರವಾಡ, ಸಂಜು ಜಾಲಗೇರಿ ಸೇರಿದಂತೆ ಗ್ರಾಮದಲ್ಲಿಯ ದೇಶದ ಅಭಿನಂದನೆಗಳು, ಗಣ್ಯರು ಪಾಲ್ಗೊಂಡಿದ್ದರು.
ತಾಲೂಕಿನ ಬೋಳೆಗಾಂವ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಸೋಮಶೇಖರ ಕೋಟೆನವರ ಅವರಿಗೆ ಸ್ವಾಗತ ಹಾಗೂ ಸನ್ಮಾನ ಮಾಡಿದ ಗ್ರಾಮಸ್ಥರು.