ಸಿಡಿಲು ಬಡಿದು ಇಂಡಿಯಲ್ಲಿ ಎಮ್ಮೆ ಸಾವು..!
ಇಂಡಿ : ಸಿಡಿಲು ಬಡಿದು ಬೆಲೆ ಬಾಳುವ ಎಮ್ಮೆ ಸಾವುಗಿಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಾಲ್ಲೂಕಿನ್ಯಾದಂತ ಗುಡುಗ,ಸಿಡಿಲು, ಮಿಂಚು ಬಿರುಗಾಳಿ ಸಹಿತ ಮಳೆಯಾಗಿದೆ. ಆದರೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಸಾವುಗಿಡಾಗಿದೆ. ಗ್ರಾಮದ ರೈತ ಮಳಸಿದ್ದಪ್ಪ ಸಿದ್ದಪ್ಪ ಸುಧಾಮ ಎಂಬುವರ ಎಮ್ಮೆ ಸಿಡಿಲಿಗೆ ಬಲಿಯಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಡಳಿತ ಅಧಿಕಾರಿ ಸಿದ್ದು ಪೂಜಾರಿ, ಹೊರ್ತಿ ಪೋಲಿಸ್ ಠಾಣಾ ಎ ಎಸ್ ಐ ಬೇಟಿ ನೀಡಿದ್ದಾರೆ.