ಬಸವನ ಬಾಗೇವಾಡಿ : ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ನರಸಲಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸ್ವಾಮಿ ವಿವೇಕಾನಂದ ಯುವಕ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಹಿಂದ ಯುವ ಮುಖಂಡ ಮುತ್ತುರಾಜ ಹಾಲಿಹಾಳ ಹಾಗೂ ಬಿಜೆಪಿ ಯುವ ಮುಖಂಡ ಗುರುನಾಥ ದಳವಾಯಿ ಮಾತನಾಡಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಸಮರ್ಪಕವಾದ ರಸ್ತೆ, ಚರಂಡಿಗಳಿಲ್ಲ. ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿವೆ. ಚರಂಡಿಯ ನೀರಿನ ಮೇಲೆ ವಯೋವೃದ್ದರು, ಮಕ್ಕಳು, ಮಹಿಳೆಯರು ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಸಮರ್ಪಕವಾದ ಚರಂಡಿ ಇಲ್ಲದೆ ಚರಂಡಿಯ ನೀರು ನಿಂತಲ್ಲೆ ನಿಂತು ಸೊಳ್ಳೆ, ನೊಣ, ಕ್ರಿಮಿ ಕೀಟಗಳು ಉತ್ಪತಿಯಾಗಿ ಗ್ರಾಮಸ್ಥರು ರೋಗ ಹರುಡುವ ಭೀತಿಯಲ್ಲಿದ್ದಾರೆ ಎಂದು ಹೇಳಿದರು.
ಇನ್ನು ಬಿಜೆಪಿ ಯುವ ಮುಖಂಡ ಮಲ್ಲು ಗೋನಾಳ ಮಾತನಾಡಿ ಗ್ರಾಮದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ ವ್ಯಾಪಾರಸ್ಥರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲ ಮತ್ತು ಕಸ ಕಡ್ಡಿ ತುಂಬಿದೆ ಅದರಲ್ಲಿಯೆ ವ್ಯಾಪಾರಸ್ಥರು ಕುಳಿತುಕೊಳ್ಳಬೇಕಾಗಿದೆ ಮತ್ತು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಒಂದು ವೇಳೆ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರು ಹಾಗೂ ಮಹಿಳೆಯರೊಂದಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕರ ವಸುಲಿಗಾರ ಭಿಮಣ್ಣ ಓದಿ ಮನವಿ ಸ್ವೀಕರಿಸಿದರು. ಮಲ್ಲು ಕೊಳಗೇರಿ, ಸದ್ದಾಂಹುಸೆನ್ ಚಪ್ಪರಬಂದ, ಶ್ರೀಶೈಲ ಓದಿ, ಸಂತೋಷ ಹೂಗಾರ, ದೇವೇಂದ್ರ ಕೊಳಗೇರಿ, ಪರಸು ಗುಡದಿನ್ನಿ ಉಪಸ್ಥಿತರಿದ್ದರು.