ಇಂಡಿ : ಬೈಕ್ ಹಾಗೂ ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಕ್ರಾಸ್ ಬಳಿ ನಡೆದಿದೆ. ವಿಜಯಪುರ ನಗರದ ಕಾಲೇಬಾಗ್ ನಗರದ ನಿವಾಸಿಗಳಾದ ಕಿರಣ ಕಟ್ಟಿಮನಿ (22) ರಾಜೂ ಗುನ್ನಾಪುರ (24) ಮೃತಪಟ್ಟಿರುವ ದುರ್ದೈವಿಗಳು. ಇನ್ನು ಡಿಕ್ಕಿಯ ರಭಸಕ್ಕೆ ಟಿಪ್ಪರ್ ಪಲ್ಟಿಯಾಗಿದೆ. ಈ ಘಟನೆ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.