ದೇಶದ ಆರ್ಥಿಕತೆಯನ್ನು ಬಲಗೊಳಿಸುವ ಬಜೆಟ್ ಇದಾಗಿದೆ..!
ಇಂಡಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರಕಾರದ ಮೂರನೇ ಬಜೆಟ್ ಮಂಡನೆಯಾಗಿದ್ದು, ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ೯ನೇ ಬಜೆಟ್ ಮಂಡಿಸಿದ್ದಾರೆ. ದೇಶದ ಆರ್ಥಿಕತೆಯನ್ನು ಬಲಗೊಳಿಸುವ ಬಜೆಟ್ ಇದಾಗಿದೆ. ಯುವಜನತೆಯ ಕೌಶಲ್ಯ ಮತ್ತು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದ್ದು, ದೇಶದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸುವ ಮಹತ್ವದ ಬಜೆಟ್ ಇದಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಸುಸಜ್ಜಿತ ಬಾಲಕಿಯರ ಹಾಸ್ಟೆಲ್‌ಗಳನ್ನು ನಿರ್ಮಿಸುವ ನಿರ್ಧಾರ ಸಂತಸ ತಂದಿದೆ. ಯುವಶಕ್ತಿಗೆ ಪ್ರೇರಣಾದಾಯಕವಾಗುವ ಜೊತೆಗೆ ರೈತರ, ಬಡವರ ಹಾಗೂ ಮಧ್ಯಮ ವರ್ಗದ ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಪ್ರವಾಸೋದ್ಯಮ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ರಕ್ಷಣಾ ವಲಯ ಸೇರಿದಂತೆ ಎಲ್ಲಾ ವಲಯಗಳ ಅಭಿವೃದ್ಧಿಯ ಜೊತೆಗೆ ಭಾರತದ ವಿಕಾಸಕ್ಕೆ ಈ ಬಜೆಟ್ ಅನುಕೂಲವಾಗಲಿದೆ.
ನಾಗೇಶ ಹೆಗಡ್ಯಾಳ, ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥಾಪಕ.
ಇಂಡಿ: ಬೆಂಗಳೂರು–ಚೆನೈ, ಬೆಂಗಳೂರು–ಹೈದರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ಕರ್ನಾಟಕದ ಆರ್ಥಿಕ ಶಕ್ತಿಗೆ ಹೊಸ ವೇಗ ನೀಡಲಿವೆ. ಉದ್ಯೋಗ, ಕೈಗಾರಿಕೆ ಮತ್ತು ಲಾಜಿಸ್ಟಿಕ್ಸ್ಗೆ ಬಲ ತುಂಬುವ ಕೇಂದ್ರ ಬಜೆಟ್ ೨೦೨೬–೨೭ ವಿಕಸಿತ ಭಾರತದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನಮೋ ಅವರ ದೃಢ ನಾಯಕತ್ವದಲ್ಲಿ, ಆರ್ಥಿಕ ಶಿಸ್ತು ಮತ್ತು ಜನಪರ ಅಭಿವೃದ್ಧಿಯ ಸಮತೋಲನದ ಬಜೆಟ್ ಮಂಡನೆಯಾಗಿದೆ.
ಶಾಂತು ಕಂಬಾರ
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಬಿಸಿ ಮೋರ್ಚಾ.
ಕೇಂದ್ರದ ಬಜೆಟ್ : 2047ರ ಪರಿಕಲ್ಪನೆ ಬಜೆಟ್ ಕೆಂಗನಾಳ
ಇದು ಭಾರತದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿ ಬಜೆಟ್ ವಿಕಸಿತ್ ಭಾರತದ, ರೈತರ ,ಮಹಿಳೆಯರ ,ಯುವಶಕ್ತಿಗೆ ಪೂರಕ ಬಜೆಟ್ ಅಂತ ಹೇಳಿದರೆ ಜೊತೆಗೆ, ಟೆಕ್ಸಟೈಲ್ ,ಕೆಮಿಕಲಪಾರ್ಕ್ ,ಆರೋಗ್ಯ ,ಪ್ರವಾಸೋದ್ಯಮ, ನೀರಾವರಿ, ಸೆಮಿಕಂಡಕ್ಟರ್, ಹೈಸ್ಪೀಡ್ ರೈಲ್ವೆ ,ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡುವ ಮೂಲಕ ಭಾರತದ ಬಾಗ್ಯದ ಬಜೆಟ್ ಅಂತಾ ಹೇಳಬಹುದು
ಒಟ್ಟಾರೆ ಒಳ್ಳೆಯ ಬಜೆಟ್ ಸ್ಥಿರತೆಯ(stability ) ಬಜೆಟ್.
ಶಿವರಾಜ್ ಕೆಂಗನಾಳ
ಜಿಲ್ಲಾ ಉಪಾಧ್ಯಕ್ಷರು ರೈತ ಮೋರ್ಚಾ ವಿಜಯಪುರ


















