ಅಫಜಲಪುರ: ತಾಲೂಕಿನ ಹೊಸೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
ಗ್ರಾಮ ಪಂಚಾಯತಿ ಸದಸ್ಯ ನಿಂಗರಾಜ ಗೌಡಗಾಂವ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರು ಚಿದಾನಂದ ಕಟ್ಟಿಮನಿ ಮಾತನಾಡಿ ಮಕ್ಕಳು ಯಾವಾಗಲೂ ಶಿಸ್ತಿನಿಂದ ವಿದ್ಯೆ ಕಲಿಯಬೇಕು. ನೀವು ಕಲಿತ ಶಿಸ್ತನ್ನು ಮುಂದೆ ನೀವು ರೂಡಿಸಿಕೊಳ್ಳಬೇಕು. ನೀವೆಲ್ಲರೂ ಈಗ ಕಷ್ಟಪಟ್ಟು ಓದಬೇಕು. ನಿಮ್ಮ ತಂದೆ-ತಾಯಿ ನಿಮ್ಮನ್ನು ಶಾಲೆಗೆ ಕಳಿಸಿರುತ್ತಾರೆ. ಅವರು ನಿಮ್ಮ ಮೇಲೆ ತುಂಬಾ ಕನಸು ಕಾಣುತ್ತಾರೆ. ನನ್ನ ಮಗ ದೊಡ್ಡ ಅಧಿಕಾರಿ ಆಗುತ್ತಾನೆ ಎಂದು ಕನಸು ಕಾಣುತ್ತಾರೆ. ಅದಕ್ಕೆ ನೀವುಗಳು ಕಷ್ಟಪಟ್ಟು ಓದಿ ತಂದೆ ತಾಯಿಯ ಕನಸನ್ನು ನನಸು ಮಾಡಬೇಕು. ಇವತ್ತು ವಿದ್ಯೆಯ ಮುಂದೆ ಯಾವ ಸಂಪತ್ತು ಇಲ್ಲ. ವಿದ್ಯೆ ದೊಡ್ಡ ಸಂಪತ್ತು ಅದಕ್ಕೆ ನೀವುಗಳು ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಚಾಲೆಂಜ ದಿಂದ ಓದಬೇಕು. ನಿಮ್ಮ ಮುಂದಿನ ಭವಿಷ್ಯ ಒಳ್ಳೆಯದಾಗಲಿ ಎಂದು ಹೇಳಿದರು.
ನಂತರ ಮಣ್ಣೂರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದ ಅಧೀಕ್ಷಕ ಸುರೇಶ ಕೋರಚಗಾಂವ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನು ವ್ಯರ್ಥ ಮಾಡದೇ ವಿದ್ಯೆಯನ್ನು ಸಂಪಾದಿಸಬೇಕು. ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಮ್ ಸಿ ಅಧ್ಯಕ್ಷ ಸಂಗಣ್ಣಾ ಅಂದೇವಾಡಿ, ಶಿವಾನಂದ ಬಳಗಾನೂರ, ಕರವೆ ಅಧ್ಯಕ್ಷ ಲಕ್ಷ್ಮೀಕಾಂತ ಚಿನಮಳ್ಳಿ, ಸೈಫನ ನಾಧ, ಶಿಕ್ಷರಾದ ಸಿದ್ರಾಮಪ್ಪ ಬುಸ್ತಿ, ಹಣಮಂತ ನಾಟಿಕಾರ, ಧರೇಪ್ಪ ನಾಮಗೌಡ, ಗುರಪ್ಪ ಕಾಳಿ, ಪ್ರಭು ಯಾಳಗಿ, ಬಸವರಾಜ ಹಿರೇಮಠ, ಶಿವಶರಣಪ್ಪ ಸಂಗೋಳಗಿ, ದೇವಾನಂದ ಬಜಂತ್ರಿ, ಮಲ್ಲಿನಾಥ ಅಲ್ಲಾಪುರ ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.